ಶಿಕ್ಷಣ

ಕೋಟೇಶ್ವರ: ವಕ್ವಾಡಿ ಗುರುಕುಲ ಶಾಲೆಯಲ್ಲಿ ರಕ್ಷಾಬಂಧನದ ಆಚರಣೆ

Views: 26

ಕೋಟೇಶ್ವರ : ವಕ್ವಾಡಿ  ಗುರುಕುಲ ವಿದ್ಯಾಸಂಸ್ಥೆಯಲ್ಲಿ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ರಕ್ಷಾ ಬಂಧನದ ಮಹತ್ವವನ್ನು ಕಥೆಯ ಮೂಲಕ ಸಹಶಿಕ್ಷಕಿ ಅಶ್ವಿನಿ ವಿವರಿಸಿದರು.ನಂತರ ಮಕ್ಕಳು ಒಬ್ಬರಿಗೊಬ್ಬರು ರಾಖಿಯನ್ನು ಕಟ್ಟಿಕೊಳ್ಳುವ ಮೂಲಕ ಅಣ್ಣ ತಂಗಿಯರ ಬಾಂಧವ್ಯವನ್ನು ಪ್ರೀತಿ, ಬಂಧುತ್ವದ ಸಂಕೇತವನ್ನು,ಪ್ರತಿಯೊಬ್ಬರೂ ಭಾವನಾತ್ಮಕವಾಗಿ ಸ್ಮರಿಸುವ ಬಾಲ್ಯದ ಅನೇಕ ಸಿಹಿ ಕಹಿ ನೆನಪುಗಳನ್ನು ತಮ್ಮ ಮನದಲ್ಲಿ ಮೂಡಿಸಿಕೊಂಡರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿ , ಪ್ರಾಂಶುಪಾಲರು ,ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button