ಶಿಕ್ಷಣ
ಕೋಟೇಶ್ವರ: ಆಹಾರ, ಸ್ವಚ್ಛತೆ, ಯೋಗ, ವಿದ್ಯಾರ್ಥಿನಿಯರ ಸಮಸ್ಯೆಯ ಕುರಿತು ಕಾರ್ಯಾಗಾರ

Views: 104
ಕೋಟೇಶ್ವರ: ಮತದಾರರ ಸಾಕ್ಷರತಾ ಸಂಘ, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಪದವಿ ಪೂರ್ವ ವಿಭಾಗದ ಆಶ್ರಯದಲ್ಲಿ ಆಯುಷ್ ಇಲಾಖೆ ಬೆಂಗಳೂರು ಇದರ ತಾಲೂಕು ಘಟಕ ಕುಂದಾಪುರ ಇಲ್ಲಿನ ವೈದ್ಯಾಧಿಕಾರಿ ಡಾ.ಶಿಲ್ಪ.ಕೆ ಇವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಆಹಾರ, ಸ್ವಚ್ಛತೆ, ಯೋಗ ಹಾಗೂ ವಿದ್ಯಾರ್ಥಿನಿಯರ ಸಮಸ್ಯೆಯ ಕುರಿತು ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಅಗತ್ಯ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಸುಧಾಕರ್ ದೇವಾಡಿಗ ಬಿ ಇವರ ‘ಓದಿನ ಹಂಗು’ ಎಂಬ ಪುಸ್ತಕವನ್ನು ಪ್ರಾಂಶುಪಾಲರಾದ ಪ್ರಕಾಶ್ ಶೆಟ್ಟಿ ಉದ್ಘಾಟಿಸಿ, ಪುಸ್ತಕದ ಪರಿಚಯ ಮಾಡಿಕೊಟ್ಟರು.
ಹಿರಿಯ ರಸಾಯನಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸುಶೀಲಾ ಹೊಳ್ಳ ಇವರ ವಂದನಾರ್ಪಣೆ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕ ಶ್ರೀ ಹರೀಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿ , ಸ್ವಾಗತಿಸಿದರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಾಕ್ಷಿಭೂತರಾದರು.