ಶಿಕ್ಷಣ
ಕೋಟೇಶ್ವರ: ಅಮಾಯಕವಾಗಿ ರಸ್ತೆ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ ವಿದ್ಯಾರ್ಥಿಗೆ ಸಾಮೂಹಿಕ ಶೃದ್ಧಾಂಜಲಿ

Views: 306
ಕುಂದಾಪುರ:ತನ್ನ ಪಾಡಿಗೆ ತಾನು ನಡೆದು ಹೋಗುತ್ತಿದ್ದ ವಿದ್ಯಾರ್ಥಿಗೆ ಟಿಪ್ಪರ್ ಡಿಕ್ಕಿಯಾಗಿ ಭಯಾನಕ ಘಟನೆ ಕೋಟೇಶ್ವರ ಹಾಲಾಡಿ ರಸ್ತೆಯ ಕಾಗೇರಿ ಎಂಬಲ್ಲಿ ಅ.1ರಂದು ನಡೆದಿದೆ.
ಮೃತ ವಿದ್ಯಾರ್ಥಿ ಕೋಟೇಶ್ವರ ಕಾಳಾವರ ವರದರಾಜ್ ಎಂ ಶೆಟ್ಟಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷ ಡಿಗ್ರಿ ಓದುತ್ತಿದ್ದ ಧನುಷ್ ಯು ಅಮೀನ್ ನಡೆದು ಹೋಗುತ್ತಿರುವ ವಿದ್ಯಾರ್ಥಿ ಮೇಲೆ ಟಿಪ್ಪರ್ ಹರಿದು ಯುವಕ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ತನ್ನಲ್ಲದ ತಪ್ಪಿಗೆ ಅಮಾಯಕವಾಗಿ ರಸ್ತೆ ಅಪಘಾತಕ್ಕೆ ತುತ್ತಾಗಿ ಸಾವನ್ನಪ್ಪಿದ ಪ್ರಥಮ ಬಿ.ಎಸ್ಸಿ ತರಗತಿ ವಿದ್ಯಾರ್ಥಿ ಧನುಷ್ ಯು ಅಮೀನ್ ಇವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಕಾಲೇಜಿನ ಸಮಸ್ತ ವಿದ್ಯಾರ್ಥಿ ವೃಂದ, ಬೋಧಕ-ಬೋಧಕೇತರ ವೃಂದದವರು ಸಭೆಯಲ್ಲಿ ಪಾಲ್ಗೊಂಡಿದ್ದು, ಮೌನ ಪ್ರಾರ್ಥನೆಯ ಮೂಲಕ ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕೋರಲಾಗಿದೆ.