ಆರೋಗ್ಯ
ಕೋಟೇಶ್ವರ:ವಿಶ್ವ ಯೋಗ ದಿನಾಚರಣೆ ಮತ್ತು ಸಮಾರೋಪ ಸಮಾರಂಭ

Views: 167
ಕುಂದಾಪುರ : ವಿಶ್ವ ಯೋಗ ದಿನಾಚರಣೆ ಮತ್ತು ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಕೋಟೇಶ್ವರ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕೋಟೇಶ್ವರ ಕೆನರಾ ಕಿಡ್ಸ್ ಸಂಸ್ಥೆಯ ವ್ಯವಸ್ಥಾಪಕ ಸುಬ್ರಹ್ಮಣ್ಯ ಶೆಟ್ಟಿ ಅವರು ಉದ್ಘಾಟಿಸಿ, ಯೋಗದ ಪ್ರಸ್ತುತತೆಯನ್ನು ಹೇಳಿ ಜಗತ್ತು ಇಂದು ಯೋಗದ ಕಡೆ ಮುಖ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ
ರೋಟರಿ ಕ್ಲಬ್ ಕೋಟೇಶ್ವರ ಅಧ್ಯಕ್ಷ ಜಗದೀಶ್ ಮೊಗವೀರ, ಎಂ ಸತೀಶ್ ನಾಯ್ಕ್ , ಕಾರ್ಯದರ್ಶಿ ಸುಭಾಷ್, ಶ್ರೀಮತಿ ಮಮತಾ ಶೆಟ್ಟಿ , ರಾಮಚಂದ್ರ ಗಾಣಿಗ, ಯೋಗ ಶಿಕ್ಷಕ ಅಣ್ಣಪ್ಪ ಉಪಸ್ಥಿತರಿದ್ದರು. ಕು.ಮೇದಿನಿ ಶೆಟ್ಟಿ ಪ್ರಾರ್ಥಿಸಿದರು, ಶ್ರೀಮತಿ ತಾರಾದೇವಿ ಸ್ವಾಗತಿಸಿ, ಪರಿಚಯಿಸಿದರು. ಶ್ರೀಮತಿ ಪ್ರೇಮ ವಂದಿಸಿದರು. ಶ್ರೀಮತಿ ಗೀತಾ ಎಸ್. ಕಾರ್ಯಕ್ರಮ ನಿರೂಪಿಸಿದರು. ಶಿಬಿರಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು.