ರಾಜಕೀಯ
ಕೋಟಿ, ಕೋಟಿ ಡೀಲ್- ಡೀಲ್ ರಾಣಿ ಚೈತ್ರಾಳಿಂದ 17 ಜನ ಮೋಸ ಹೋಗಿದ್ದಾರೆ: ಕಾಂಗ್ರೆಸ್ ಆರೋಪ

Views: 77
ಮೈಸೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಐದು ಕೋಟಿ ರೂಪಾಯಿ ವಂಚಿಸಿರುವ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಹಲವಾರು ಮಂದಿಗೆ ವಂಚಿಸಿದ್ದು, ಸುಮಾರು 185 ಕೋಟಿ ರೂಪಾಯಿ ವ್ಯವಹಾರ ನಡೆದಿರುವುದಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಆರೋಪಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಂಚನೆ ಪ್ರಕರಣದಲ್ಲಿ ಒಟ್ಟು 17 ಜನರು ಮೋಸ ಹೋಗಿದ್ದಾರೆ. 23 ಜನಕ್ಕೆ ಟಿಕೆಟ್ ಕೊಡಿಸುವುದಾಗಿ ಅವರಿಂದ ಹಣ ಪಡೆದಿದ್ದು, ಅಂದಾಜು 185 ಕೋಟಿ ರೂ. ವ್ಯವಹಾರ ನಡೆದಿದೆ. ಆಕೆ ಯಾರ ಬಳಿ ಹಣ ಪಡೆದಿದ್ದಾಳೆ, ಯಾರಿಗೆಲ್ಲಾ ಹಣ ಸಂದಾಯವಾಗಿದೆ ಎನ್ನುವುದನ್ನು ಸಿಸಿಬಿ ಪೊಲೀಸರು ಇನ್ನು ಎರಡು ದಿನಗಳಲ್ಲಿ ಬಹಿರಂಗಪಡಿಸಲಿದ್ದಾರೆ ಎಂದು ದೂರಿದರು.






