ಇತರೆ

ಕೊಲ್ಲೂರು ಸೌಪರ್ಣಿಕಾ ನದಿಗೆ ವ್ಯಕ್ತಿ ಬಿದ್ದು  ಕೊಚ್ಚಿಹೋದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಡೆತ್ ನೋಟ್ ನಲ್ಲಿ ಏನಿದೆ?

Views: 145

ಕನ್ನಡ ಕರಾವಳಿ ಸುದ್ದಿ: ಕೊಲ್ಲೂರು ಸೌಪರ್ಣಿಕಾ ನದಿಗೆ ಬಿದ್ದು ಸಾವನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟಿಸ್ಟ್ ಸಿಕ್ಕಿದೆ. ಸಾವನ್ನಪ್ಪಿದ ನಟೇಶ್ ಅವರು ತನ್ನ ಆತ್ಮಹತ್ಯೆಗೆ ಸಂತು ಯಾನೇ ಸಂತೋಷ್ ಮತ್ತು ದಳಿ-ನಾಗ ಇವರೇ ಕಾರಣ ಎಂದು ಮೊಬೈಲ್ ನಲ್ಲಿ ಬರೆದು ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಏನಿದು ಪ್ರಕರಣ?

ಅಗಸ್ಟ್ 7ರಂದು ಬೆಳಿಗ್ಗೆ ನಟೇಶ್ (36) ಕೊಲ್ಲೂರಿನ ಸಂಪ್ರೆ ಎಂಬಲ್ಲಿಯ ಸೌಪರ್ಣಿಕ ನದಿಯಲ್ಲಿ ಜಾರಿ ಬಿದ್ದು ಹರಿಯುತ್ತಿದ್ದ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಹುಡುಕಾಡಿದಾಗ ನಟೇಶರವರ ಮೃತ ದೇಹ  ಕೊಲ್ಲೂರಿನ ಮಾವಿನಕಾರು ಸೇತುವೆ ಬಳಿ ಬೆಳಿಗ್ಗೆ 9:00 ಗಂಟೆಗೆ ನದಿಯಲ್ಲಿ ದೊರೆತಿದ್ದು ಕೊಲ್ಲೂರು ಠಾಣೆಯಲ್ಲಿ ಯುಡಿಆರ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ನಟೇಶ್ ರವರು ಸೌಪರ್ಣಿಕಾ ನದಿಯ ದಡದಲ್ಲಿ ನಿಲ್ಲಿಸಿದ ಅವರ ಕಾರಿನ ಬೀಗದ ಕೀ ಕಾರಿನಲ್ಲಿಯೇ ಇದ್ದು, ಇದನ್ನು ಅವರ ಮನೆಯ ಬಳಿ ನಿಲ್ಲಿಸಿದ್ದು, ನಟೇಶ್ ರವರ ಕಾರಿನ ಒಳಗೆ ನೋಡಿದಾಗ ಕಾರಿನ ಒಳಗೆ ನಟೇಶ್ ರವರು ಬಳಸುತ್ತಿದ್ದ ಮೊಬೈಲ್ ಮತ್ತು ಒಂದು ಸಣ್ಣ ಚೀಟಿ ದೊರೆತ್ತಿದ್ದು,ಅದರಲ್ಲಿ ಮೊಬೈಲ್ ಪಾಸ್ ವರ್ಡ್ ಇದ್ದು, ತನ್ನ ಸಾವಿನ ರಹಸ್ಯ ಮೊಬೈಲ್ ಗ್ಯಾಲರಿಯಲ್ಲಿದೆ ಎಂಬಿತ್ಯಾದಿಯಾಗಿ ಬರೆದಿರುವುದನ್ನು ನೋಡಿ ಮೊಬೈಲ್ ಅನ್ನು ಒಪನ್ ಮಾಡಿ ನೋಡಿದಾಗ ಅದರಲ್ಲಿನ ವಿಡಿಯೋ ತುಣುಕುಗಳಲ್ಲಿ ಸಂತು ಮತ್ತು ನಾಗೇಶ @ ದಳಿ-ನಾಗ ಇವರು ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಇದರಿಂದ ಮನನೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಇದ್ದು. ನಟೇಶ್ ರವರ ಆತ್ಮಹತ್ಯೆಗೆ ಸಂತು ಯಾನೇ ಸಂತೋಷ್ ಮತ್ತು ದಳಿ-ನಾಗ ಇವರೇ ಕಾರಣರಾಗಿರುವುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿರುತ್ತದೆ.

Related Articles

Back to top button
error: Content is protected !!