ಶಿಕ್ಷಣ

ಕೊರೋನ ಕಾಲದಲ್ಲಿ  ವಿದ್ಯಾರ್ಥಿಗಳ ಉತ್ತರ ಪತ್ರಿಕೆ ಮೌಲ್ಯ ಮಾಪನ ಮಾಡಿದ ಉಪನ್ಯಾಸಕರಿಗೆ ಸಂದಾಯವಾಗದ ಹಣ: ನೊಂದ ಉಪನ್ಯಾಸಕರು ವಿ.ವಿ.ವಿರುದ್ಧ ಆಕ್ರೋಶ

Views: 1

ಕುಂದಾಪುರ: ಕೊರೋನಾ ಸಂದರ್ಭದಲ್ಲಿ ಬಾಕಿ ಉಳಿದಿರುವಂತಹ ಉತ್ತರ ಪತ್ರಿಕೆಯ ಮೌಲ್ಯಮಾಪನವನ್ನು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪದವಿ ಕಾಲೇಜಿನ ಉಪನ್ಯಾಸಕರು ಡಿಸೆಂಬರ್ 2020-21 ಮತ್ತು ಜನವರಿ 2021-22, ಈಗಾಗಲೇ ಮೌಲ್ಯಮಾಪನ ಮಾಡಿರುತ್ತಾರೆ.

ಉಡುಪಿಯಲ್ಲಿ ಎಂ.ಜಿ.ಎಂ ಮತ್ತು ಭಂಡಾರ್ ಕಾರ್ಸ್ ಕಾಲೇಜು ಕುಂದಾಪುರ. ನಂತರ ಎಂಜಿಎಂ ಕಾಲೇಜಿನ ಉತ್ತರ ಪತ್ರಿಕೆಯು ಕೂಡ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಂದು ಆ ಉತ್ತರ ಪತ್ರಿಕೆ ಮೌಲ್ಯಮಾಪನವನ್ನು ಕೂಡ ಕುಂದಾಪುರ ವಲಯದ ಹಾಗೂ ಉಡುಪಿ ವಲಯದಲ್ಲಿರುವಂತಹ ಉಪನ್ಯಾಸಕರು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮೌಲ್ಯಮಾಪನ ಮಾಡಿರುತ್ತಾರೆ.

ಆದರೆ, ಮೌಲ್ಯಮಾಪನ ಮಾಡಿರುವ ಉಪನ್ಯಾಸಕರ ಟಿಎ ಮತ್ತು ಡಿಎ ಹಾಗೂ ಪತ್ರಿಕೆಯ ಮೇಲೆ ಸಿಗಬೇಕಾಗಿರುವ ಮೌಲ್ಯವು ಉಪನ್ಯಾಸಕರಿಗೆ ಇದುವರೆಗೂ ಸಂದಾಯವಾಗಲಿಲ್ಲ. ಈ ಕುರಿತು ಮಂಗಳೂರು ವಿಶ್ವವಿದ್ಯಾಲಯ ಕಣ್ಣು ಮುಚ್ಚಿಕೊಂಡೆ ಇರುವುದು ಕಂಡುಬಂದಿದೆ.

ಇದು ಮೌಲ್ಯಮಾಪಕರ ಸಹನೆಯನ್ನು ಪರೀಕ್ಷೆ ಮಾಡುವಂತಾಗಿದೆ. ಸೇವೆಯೇ ಪರಮ ಗುರಿ ಎಂದು ಭಾವಿಸಿರುವ ಉಪನ್ಯಾಸಕರಿಗೆ ತಣ್ಣೀರನ್ನು ಬಟ್ಟೆಯನ್ನು ಹೊಟ್ಟೆಗೆ ಕಟ್ಟಿಕೊಳ್ಳುವಂತಾಗಿದೆ. ಈ ಮೌಲ್ಯಮಾಪನವನ್ನು ಸರಕಾರಿ ಪದವಿ ಕಾಲೇಜು ಮತ್ತು ಖಾಸಗಿಅನುದಾನಿತ ಪದವಿ ಕಾಲೇಜು ಹಾಗೂ ಸರಕಾರಿ ಕಾಲೇಜಿನಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರು ಕೂಡ ಮೌಲ್ಯಮಾಪನ ಮಾಡಿರುತ್ತಾರೆ 15 ರಿಂದ20 ದಿನದವರೆಗೆ ಕುಂದಾಪುರದ ಭಾಗಕ್ಕೆ ಹೆಬ್ರಿ ಉಡುಪಿಯ ಆಸುಪಾಸಿನಿಂದ ಪ್ರತಿದಿನ ಬಂದು ಮೌಲ್ಯಮಾಪನ ಮಾಡಿ ಹೋದಂತಹ ಉಪನ್ಯಾಸಕರಿಗೆ ಈಗಾಗಲೇ ನಷ್ಟವಾಗಿದೆ.

ಈ ನಷ್ಟವನ್ನು ಬರಿಸುವವರು ಯಾರು ? ಸರಕಾರಿ ಮತ್ತು ಖಾಸಗಿ ಅನುದಾನಿತ ಕಾಲೇಜು ಉಪನ್ಯಾಸಕರಿಗಿಂತ ಹೆಚ್ಚು ಗುತ್ತಿಗೆ ಆಧಾರದಲ್ಲಿ ಇರುವ ಉಪನ್ಯಾಸಕರೇ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿರುತ್ತಾರೆ. ಜಾತಕ ಪಕ್ಷಿಯಂತೆ ಕಾದು ಕುಳಿತಿರುವ ಬಡ ಉಪನ್ಯಾಸಕರಿಗೆ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡಿದ ಹಣವನ್ನು ಸಂದಾಯ ಮಾಡುವ ಕೆಲಸವನ್ನು ಮಾಡಬೇಕಾಗಿದೆ ಉಪನ್ಯಾಸಕರ ಸಹನೆಯನ್ನು ವಿಶ್ವವಿದ್ಯಾಲಯ ಪರೀಕ್ಷೆ ಮಾಡಬಾರದು ಎಂದು ನೊಂದ ಉಪನ್ಯಾಸಕರು ತಮ್ಮ ವಿಚಾರವನ್ನು ತೋಡಿಕೊಂಡಿದ್ದಾರೆ

Related Articles

Back to top button