ಇತರೆ
ಕೊಡಚಾದ್ರಿಗೆ ಟ್ರೆಕ್ಕಿಂಗ್ ಮಾಡಲೆಂದು ಬಂದಿದ್ದ ಯುವಕ ದಾರುಣ ಅಂತ್ಯ
Views: 143
ಕನ್ನಡ ಕರಾವಳಿ ಸುದ್ದಿ:ಶಿವಮೊಗ್ಗದ ಹೊಸನಗರ ತಾಲೂಕಿನ ಚಾರಣಿಗರ ಇಷ್ಟದ ಜಾಗ ಕೊಡಚಾದ್ರಿಗೆ ಟ್ರೆಕ್ಕಿಂಗ್ ಮಾಡಲೆಂದು ಬಂದಿದ್ದ ಪ್ರವಾಸಿಗನೊಬ್ಬ ದಾರುಣ ಅಂತ್ಯ ಕಂಡಿದ್ದಾನೆ.
ಬೆಂಗಳೂರಿನ ಯಲಹಂಕದ ಶ್ರೀಕಾಂತರ (28) ಮೃತರು. ಕೊಡಚಾದ್ರಿ ವೀಕ್ಷಣೆಗಾಗಿ ಸ್ನೇಹಿತರ ಜತೆ ಶ್ರೀಕಾಂತ್ ಬಂದಿದ್ದರು. ಮುಂಜಾನೆ ಎದ್ದು ಎಲ್ಲರೂ ಚಾರಣಕ್ಕೆ ಹೊರಡೋಕೆ ತಯಾರಾಗುವ ಮುನ್ನ ದುರ್ಘಟನೆ ಸಂಭವಿಸಿತ್ತು. ರಾತ್ರಿಯೇ ಶ್ರೀಕಾಂತ್ ಹೃದಯಾಘಾತಕ್ಕೆ ಬಲಿಯಾಗಿದ್ದು, ಸ್ನೇಹಿತರು ಆಘಾತಕ್ಕೊಳಗಾಗಿದ್ದರು.
ಸಂಪೆಕಟ್ಟೆ ಪ್ರದೇಶದಲ್ಲಿ ಸ್ನೇಹಿತರ ಮನೆಯಲ್ಲಿ (ಕಟ್ಟಿನಹೊಳೆ ಸಮೀಪ) ರಾತ್ರಿ ತಂಗಿದ್ದರು. ಮುಂಜಾನೆ ಶಿಖರಕ್ಕೆ ಹೊರಡುವ ಯೋಜನೆ ಮಾಡಿದ್ದರು. ಆದರೆ ರಾತ್ರಿ ಶ್ರೀಕಾಂತ್ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದಿದೆ. ತಂಗಿದ್ದ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ. ಸ್ನೇಹಿತರು ತಕ್ಷಣವೇ ಆತನನ್ನು ಹೊಸನಗರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ವೈದ್ಯರು ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ.






