ಕೃಷ್ಣ ಭಕ್ತಿಯ ಮೂಲಕ ಪರಿಚಯವಾದ ಸುಳ್ಯದ ವರ ಅಮೇರಿಕನ್ ವಧುವಿನ ಸರಳ ವಿವಾಹ
Views: 51
ಕನ್ನಡ ಕರಾವಳಿ ಸುದ್ದಿ: ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ನಡೆದ ಈ ವಿವಾಹವೇ ನೈಜ ನಿದರ್ಶನ. ಕೃಷ್ಣ ಭಕ್ತಿಯ ಮೂಲಕ ಪರಿಚಯವಾದ ಸುಳ್ಯದ ಯುವಕ ಹಾಗೂ ಅಮೆರಿಕದ ಯುವತಿ ಪ್ರೀತಿಸಿ ಈಗ ಹಿಂದೂ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆಯ ಬಿ. ಕೆ. ಕೇಶವ ಅವರ ಪುತ್ರ ಸಾಯಿ ಸಂಕೇತ್ ಅವರು ಅಮೆರಿಕದ ಚಿಕಾಗೋ ನಿವಾಸಿ, ಡಾ. ಚಾರ್ಲ್ಸ್ ಅವರ ಪುತ್ರಿ ಶಾನೋನ್ ಅವರನ್ನು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು.
ಆಷಾಢ ಮಾಸ ಆರಂಭವಾಗುವ ಹಿನ್ನೆಲೆಯಲ್ಲಿ ಶೀಘ್ರವಾಗಿ ಮದುವೆ ನೆರವೇರಿಸುವ ನಿರ್ಧಾರ ಕೈಗೊಳ್ಳಲಾಯಿತು. ಇದರಿಂದ ಅಮೆರಿಕದಲ್ಲಿದ್ದ ಶಾನೋನ್ ಅವರ ಕುಟುಂಬದವರು ಭಾರತಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ಆದರೂ ಎರಡೂ ಕುಟುಂಬಗಳ ಸಂಪೂರ್ಣ ಒಪ್ಪಿಗೆಯೊಂದಿಗೆ ಸಂಪಾಜೆಯ ದೇವಸ್ಥಾನದಲ್ಲಿ ಬಂಧು-ಬಳಗದ ಸಮ್ಮುಖದಲ್ಲಿ ವಿವಾಹ ನೆರವೇರಿತು.
ಭಾರತೀಯನನ್ನು ವಿವಾಹವಾಗಿರುವುದರಲ್ಲಿ ನನಗೆ ತುಂಬಾ ಹೆಮ್ಮೆ ಮತ್ತು ಸಂತೋಷವಿದೆ. ಭಾರತೀಯ ಸಂಸ್ಕೃತಿ, ಆಧ್ಯಾತ್ಮ ಮತ್ತು ಕುಟುಂಬ ವ್ಯವಸ್ಥೆ ನನ್ನನ್ನು ತುಂಬಾ ಸೆಳೆದಿವೆ ಎಂದು ಫಾರಿನ್ ಯುವತಿ ಶಾನೋನ್ ತಿಳಿಸಿದ್ದಾರೆ.






