ಕೃತಕ ಬಣ್ಣದ ಆಹಾರ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ ಕುರಿತು ವೈದ್ಯರು ಹೇಳಿದ್ದೇನು?

Views: 65
ಬೆಂಗಳೂರು:ಮಾರ್ಚ್ ತಿಂಗಳಲ್ಲಿ ಕಾಟನ್ ಕ್ಯಾಂಡಿ, ಗೋಬಿಗೆ ಕೃತಕ ಬಣ್ಣ ಬಳಕೆಯನ್ನು ನಿರ್ಬಂಧಿಸಿತ್ತು. ಬಳಿಕ ಜೂ. 24 ರಂದು ರಾಜ್ಯಾದ್ಯಂತ ವೆಜ್, ಚಿಕನ್,ಫಿ ಶ್ ಇತರೆ ಕಬಾಬ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ
ಈ ಆದೇಶ ಉಲ್ಲಂಘಿಸಿ ಆಹಾರಗಳಿಗೆ ಇವುಗಳನ್ನು ಬಳಕೆ ಮಾಡಿದಲ್ಲಿ 10 ಲಕ್ಷ ರೂ. ಗಳವರೆಗೆ ದಂಡ ಮತ್ತು 7 ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದೆ.
ಈ ಬೆನ್ನಲ್ಲೇ ಮಾತನಾಡಿರುವ ತಜ್ಞರು ಇವುಗಳ ಕಟ್ಟುನಿಟ್ಟಿನ ನಿಷೇಧ ಕುರಿತು ಸಹಮತ ಸೂಚಿಸಿದ್ದು, ಇವುಗಳ ಸೇವನೆಯಿಂದ ಆಗುವ ಅಪಾಯ ಕುರಿತು ತಿಳಿಸಿದ್ದಾರೆ. ಕೃತಕ ಬಣ್ಣಗಳು ಆಹಾರವನ್ನು ನೋಡುವಲ್ಲಿ ಕಣ್ಸೆಳೆಯುವಂತೆ ಮಾಡಿ, ಇದು ಗ್ರಾಹಕರಲ್ಲಿ ತಿನ್ನುವ ಬಯಕೆಯನ್ನು ಹೆಚ್ಚಿಸಲಿವೆ ಎಂದಿದ್ದಾರೆ.
ಸೂರ್ಯಕಾಂತಿ ಹಳದಿ, ಕಾರ್ಮೊಸಿನ್, ರಡೊಮೈನ್ ಬಿ ಸೇರಿದಂತೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಾಗಿ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಹೀಗೆ ಪರೀಕ್ಷೆಗೊಳಪಡಿಸಿದ ಮಾದರಿಗಳಲ್ಲಿ 8 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ (ಸನ್‌ಸೆಟ್ ಯೆಲ್ಲೋ 7 ಮಾದರಿಗಳು ಹಾಗೂ ಸನ್‌ಸೆಟ್ ಯೆಲ್ಲೋ ಮತ್ತು ಕಾರ್ಮೋಸಿನ್ ಹೊಂದಿರುವ ಮಾದರಿಗಳು 1) ಕೂಡಿರುವುದು ಅಸುರಕ್ಷಿತ ಅನ್ನೋದು ಪರೀಕ್ಷಾ ವರದಿಗಳಲ್ಲಿ ಕಂಡುಬಂದಿತ್ತು. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ರ ನಿಯಮ 3(1) (zz) (viii)ರನ್ವಯ ಅಸುರಕ್ಷಿತ ಎಂದು ವರದಿ ಮಾಡಲ್ಪಟ್ಟಿರುತ್ತವೆ. ಕೃತಕ ಬಣ್ಣಗಳು ಅಲರ್ಜಿ, ಮಕ್ಕಳಲ್ಲಿ ಅಧಿಕ ಕ್ರಿಯಾಶೀಲತೆ ಹಾಗೂ ಕಾರ್ಸಿನೋಜೆನಿಕ್ ಪರಿಣಾಮ ಬೀರಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕಬಾಬ್ಗೆ ಬಳಕೆ ಮಾಡುತ್ತಿರುವ ಈ ಕೃತಕ ಬಣ್ಣಗಳು ಅಪಾಯಕಾರಿ ಮಟ್ಟದಲ್ಲಿದ್ದು, ಇದು ಸಾರ್ವಜನಿಕರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಇವುಗಳ ನಿಷೇಧಕ್ಕೆ ಕಟ್ಟು ನಿಟ್ಟಿನ ನಿಯಂತ್ರಣ ಅಗತ್ಯವಾಗಿದೆ ವೈದ್ಯರು ತಿಳಿಸಿದ್ದಾರೆ.
ಕೃತಕ ಬಣ್ಣಗಳ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮಗಳೇನು?: ಕೃತಕ ಸಿಂಥೆಟಿಕ್ ಬಣ್ಣಗಳನ್ನು ಮಕ್ಕಳು ಸೇವಿಸಿದಾಗ ಅವರಲ್ಲಿ ಅಕ್ರಣಕಾರಿ ನಡುವಳಿಕೆ ಬೆಳವಣಿಗೆ ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಲ್ಲಿನ ಕೆಲವು ಕಾರ್ಸಿನೋಜೆನಿಕ್ ಮತ್ತು ಥೈರಾಯ್ಡ್ ಕ್ಯಾನ್ಸರ್ಗೆ ಕಾರಣವಾಗುತ್ತವೆ. ಈಗಾಗಲೇ ಅಸ್ತಮಾ ಮತ್ತು ಅಲರ್ಜಿ ಸಮಸ್ಯೆ ಹೊಂದಿರುವರಲ್ಲಿ ಕೃತಕ ಬಣ್ಣಗಳ ಸೇವನೆ ಮತ್ತಷ್ಟು ಆರೋಗ್ಯವನ್ನು ಬಿಗಡಾಯಿಸುತ್ತದೆ.
ಕೃತಕ ಬಣ್ಣಗಳ ಆಹಾರ ಸೇವನೆಯಿಂದ ಆಕ್ಸಿಡೇಟಿವ್ ಒತ್ತಡ ಮತ್ತು ಕೋಶಗಳ ಅಪೊಪ್ಟೋಸಿಸ್ ಮತ್ತು ಬ್ರೈನ್ಸ್ಟೆಮ್ ಮೇಲೆ ಪರಿಣಾಮ ಬೀರುತ್ತದೆ. ರೊಡೊಮೈನ್ ಬಿ ಎಂಬುದು ಹಸಿರು ಬಣ್ಣದ ಪುಡಿಯ ರೂಪದಲ್ಲಿ ಸಿಗುತ್ತದೆ. ಇದು ನೀರಿನೊಂದಿಗೆ ಬೆರೆಸಿದಾಗ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಇದು ಮೂತ್ರಪಿಂಡ, ಯಕೃತ್ಗೆ ಹಾನಿ ಮಾಡುವ ಜೊತೆಗೆ ಹೊಟ್ಟೆಯಲ್ಲಿ ಗಡ್ಡೆ ಬೆಳವಣಿಗೆಗೆ ಕಾರಣವಾಗಬಹುದು. ಈ ರೀತಿಯ ಕೃತಕ ಬಣ್ಣದ ಆಹಾರಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮೆದುಳಿನ ಸೆರೆಬೆಲ್ಯೂಮ್ ಅಂಗಾಂಶಕ್ಕೆ ಹಾನಿ ಆಗುತ್ತದೆ. ಮೆದುಳಿನ ಕಾರ್ಯಾಚರಣೆಗೂ ಅಡ್ಡಿಯುಂಟಾಗುತ್ತದೆ.