ಇತರೆ
ಕುಶಾಲನಗರ ಸಮೀಪ ಭೀಕರ ಅಪಘಾತ; ಓರ್ವ ಸಾವು, ಮಗು ಸೇರಿ ನಾಲ್ವರ ಸ್ಥಿತಿ ಗಂಭೀರ

Views: 48
ಕೊಡಗು: ಒಮ್ನಿ ಕಾರು ಹಾಗೂ ಬೊಲೆರೋ ಜೀಪ್ ನಡುವೆ ಭೀಕರ ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಕುಶಾಲನಗರ ಸಮೀಪದ ಆನೆಕಾಡು ಬಳಿ ನಡೆದಿದೆ.ದೇವಯ್ಯ ಮೃತಪಟ್ಟವರು.
ಮೃತ ವ್ಯಕ್ತಿಯು ಮೂಲತಃ ಮಡಿಕೇರಿ ಸಮೀಪದ ಕಾಲೂರು ನಿವಾಸಿ. ಮಡಿಕೇರಿಯಿಂದ ನಾಮಕರಣ ಮುಗಿಸಿ ಹೋಗುವಾಗ ಈ ಅಪಘಾತ ಸಂಭವಿಸಿದೆ. ಇದೇ ಕಾರಿನಲ್ಲಿದ್ದ ಓರ್ವ ಮಗು ಸೇರಿ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.
ಗಾಯಗೊಂಡವನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಕುಶಾಲನರ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.






