ಕುಶಾಲ ನಗರದಲ್ಲಿ ದತ್ತರಾಜ್ ಶೆಟ್ಟಿಗಾರ್ ನಿಗೂಢ ಸಾವು, ಸಮಗ್ರ ತನಿಖೆಗೆ ಆಗ್ರಹ
Views: 1744
ಕನ್ನಡ ಕರಾವಳಿ ಸುದ್ದಿ: ಬಂಟ್ವಾಳ ತಾಲೂಕಿನ ಕೊಯ್ಲಾ ನಿವಾಸಿ ನೋಣಯ್ಯ ಶೆಟ್ಟಿಗಾರರ ಪುತ್ರ ದತ್ತರಾಜ್ ಶೆಟ್ಟಿಗಾರ್ (54) ಅವರು ಗುರುವಾರ ಹಾಸನ ಜಿಲ್ಲೆಯ ಕುಶಾಲ ನಗರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ
ಮೃತರು ಶಿಕ್ಷಕಿ ಪತ್ನಿ, ಪುತ್ರಿ, ತಂದೆ, ತಾಯಿಯನ್ನು ಅಗಲಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪದ್ಮಶಾಲಿ ಮಹಾ ಸಭಾದ ಕ್ರೀಡಾ ಸಂಚಾಲಕರಾಗಿರುವ ದತ್ತರಾಜ್ ಶೆಟ್ಟಿಗಾರ್ ಅವರು ಕುಶಾಲನಗರದ ಬಳಿ ಇರುವ ತನ್ವಿ ಸಿಮೆಂಟ್ ಪ್ರಾಡಕ್ಟ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನ.20 ರಂದು ರಂದು ಬೆಳ್ಳಿಗ್ಗೆ 7.20 ರ ಸಮಯದಲ್ಲಿ ತನ್ನ whatsapp ಸ್ಟೇಟಸ್ ನಲ್ಲಿ “ನನ್ನ ಎಲ್ಲಾ ಪ್ರೀತಿಯ ಗ್ರಾಹಕರೇ ನಮ್ಮಲ್ಲಿ ಸಾಮಗ್ರಿಗಳನ್ನು ಖರೀದಿಸಿ ಪೇಮೆಂಟ್ ಮಾಡದೇ ನನಗೆ ಸಹಕರಿಸಿದ ಎಲ್ಲಾ ಮಹಾನ್ ಕಾಂಟ್ರಾಕ್ಟ್ ದಾರರಿಗೆ ನನ್ನ ನಮಸ್ಕಾರಗಳು” ಎಂದು ಬರೆದುಕೊಂಡಿದ್ದಾರೆ. ತದನಂತರ ತನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅವರ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇರುವುದರಿಂದ ಮನೆಯವರು ದಿಘ್ರಾಂತರಾಗಿ ಹುಡುಕಾಟ ಮಾಡಿದ್ದಾರೆ.
ದತ್ತ ರಾಜ್ ಶೆಟ್ಟಿಗಾರ್ ಅವರು ತನ್ವಿ ಸಿಮೆಂಟ್ ಪ್ರಾಡಕ್ಟ್ ಕಂಪನಿಯ ತಮ್ಮ ದೊಡ್ಡ ವ್ಯವಹಾರದಲ್ಲಿ ಗ್ರಾಹಕರಿಂದ ಕೋಟ್ಯಾಂತರ ರೂಪಾಯಿ ಹಣ ಬರಬೇಕಾಗಿರುವುದರಿಂದ ವಿಚಲಿತರಾಗಿದ್ದರು. ಗುರುವಾರ ಅಪರಾಹ್ನ ಕುಶಾಲನಗರದ ಸಮೀಪ ದತ್ತರಾಜ್ ಅವರ ಮೃತದೇಹ ಪತ್ತೆಯಾಗಿದೆ.ಶವ ಪರೀಕ್ಷಿಸಿದ ಮನೆಯವರು ನಿಗೂಢ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಮೃತರ ಸಹೋದರ ಹರೀಶ್ಚಂದ್ರ ಶೆಟ್ಟಿಗಾರ್ ಅವರು ಇದೊಂದು ಸಹಜ ಸಾವು ಅಥವಾ ಆತ್ಮಹತ್ಯೆ ಅಲ್ಲ ಸಾವಿನ ಬಗ್ಗೆ ಸಂಶಯವಿರುವುದರಿಂದ ಸಮಗ್ರ ತನಿಖೆಯಾಗಬೇಕೆಂದು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಇಂದು ಬೆಳಿಗ್ಗೆ ಹಾಸನದ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಸಂಜೆ 5 ಘಂಟೆ ಹೊತ್ತಿಗೆ ಬಂಟ್ವಾಳದ ಸ್ವಗೃಹ ಕೊಯ್ಲಾದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲದಿಂದ ತಿಳಿದುಬಂದಿದೆ.