ಸಾಂಸ್ಕೃತಿಕ

ಕುಂದಾಪುರ: 69ನೇ ಕನ್ನಡ ರಾಜ್ಯೋತ್ಸವ ಸಮಾರಂಭ:ಕನ್ನಡದ ಪ್ರಸಿದ್ಧ ಕವಿಗಳು ರಚಿಸಿದ “ಕನ್ನಡ ಗೀತಗಾಯನ” 

Views: 106

ಕನ್ನಡ ಕರಾವಳಿ ಸುದ್ದಿ:ಕುಂದಾಪುರ ತಾಲೂಕು ಆಡಳಿತದ ವತಿಯಿಂದ ನ.1 ರಂದು ಏರ್ಪಡಿಸಿದ 69 ನೆಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ, ಶ್ರೀ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮ್ಯಾಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹಂಗಳೂರು ಇಲ್ಲಿಯ ವಿದ್ಯಾರ್ಥಿಗಳಿಂದ ಕನ್ನಡದ ಕವಿಗಳ ಕನ್ನಡ ಗೀತ ಗಾಯನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಕುಮಾರಿ ನಿಸರ್ಗ , ಕುಮಾರಿ ಐಶ್ವರ್ಯ, ಕುಮಾರಿ ದುರ್ಗಾ, ಕುಮಾರಿ ಸಿಂಚನ, ಕುಮಾರಿ ಲಕ್ಷ್ಮಿ ಹಾಗೂ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಶ್ರೀಮತಿ ಆಶಾದೇವಿ ನಾಯಕ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ವಿನಯ,ಶಶಿಕಲಾ ಅವರು ಪ್ರಸ್ತುತ ಪಡಿಸಿದರು.ಕೀಬೋರ್ಡ್ ನಲ್ಲಿ ಕಲಾವಿದರಾದ ಶ್ರೀ ರಾಧಕೃಷ್ಣ ಸಾರಂಗ್ ಕುಂದಾಪುರ, ಶ್ರೀ ಅಶೋಕ್ ಸಾರಂಗ ಕುಂದಾಪುರ ರಿದಂ ಪ್ಯಾಡ್ ಅಲ್ಲಿ ಸಹಕರಿಸಿದರು, ಗಾಯಕ ಡಾ.ಗಣೇಶ್ ಗಂಗೊಳ್ಳಿ ಅವರ ಮಾರ್ಗದರ್ಶನದಲ್ಲಿ ಕನ್ನಡದ ಪ್ರಸಿದ್ಧ ಕವಿಗಳು ರಚಿಸಿದ ಕನ್ನಡ ಗೀತಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಿದರು

Related Articles

Back to top button
error: Content is protected !!