ಶಿಕ್ಷಣ
ಕುಂದಾಪುರ ಹೆಲ್ಪಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ :ತಲ್ಲೂರು ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

Views: 25
ಕುಂದಾಪುರ: ಹೆಲ್ಪಿಂಗ್ ಹ್ಯಾಂಡ್ಸ್ ವಿಧ್ಯಾನಿಧಿ ಅಭಿಯಾನದ ಮೂಲಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೋಟೆಬಾಗಿಲು ತಲ್ಲೂರಿನ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್(ರಿ.) ಇದರ ಅಧ್ಯಕ್ಷರಾದ ಪ್ರದೀಪ ಕೋಟೇಶ್ವರ, ಶ್ರೀಮತಿ ರಜನಿ, ಪ್ರದೀಪ, ಕಾರ್ಯದರ್ಶಿಯಾದ ಸರಿನೀತ್ ಖಾರ್ವಿ, ರತನ್, ಪ್ರದೀಪ್ ಕಾಂಚನ್, ಅವಿನಾಶ್, ಸುಚೀತ, ತಿಲಕ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ರಮೇಶ್ ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು.
ಶಾಲಾ ಮುಖ್ಯ ಶಿಕ್ಷಕರಾದ ವಿಠಲ ಕಾಮತ್ ಸ್ವಾಗತಿಸಿದರು. ಶ್ರೀಮತಿ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಜೂಲಿಯಾನ ಡಾಯಸ್ ವಂದಿಸಿದರು.