ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

Views: 1
ಕುಂದಾಪುರ:ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರ್ ಆಚಾರ್ಯ ಅವರು ವಹಿಸಿದ್ದರು.
ಧ್ವಜಾರೋಹಣವನ್ನು ನೆರವೇರಿಸಿ ಕಾರ್ಯಕ್ರಮದ ಕುರಿತು ಮಾತನಾಡುತ್ತಾ ‘ಭಾರತ ಸ್ವತಂತ್ರ ಗೊಳ್ಳುವ ಮುಂಚೆ ಸ್ವತಂತ್ರ ಪೂರ್ವದಲ್ಲಿ ಕುಂದಾಪುರದ ಮಹನೀಯರಾದ ಹಲಸ್ನಾಡು ಸೂರಪ್ಪ ಶೆಟ್ಟಿ, ಮೊಳಹಳ್ಳಿ ಮಹಾಬಲ ಹೆಗ್ಡೆ, ಕೊಗ್ಗ ಕಾಮತ್ ಮೊದಲಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಅವರನ್ನು ನಾವು ಸ್ಮರಿಸಲೇಬೇಕೆಂದರು. ಗಾಂಧೀಜಿಯವರು 1934 ಫೆಬ್ರುವರಿ 27ರಂದು ಕುಂದಾಪುರದ ಗಾಂಧಿ ಮೈದಾನಕ್ಕೆ ಬಂದು ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ನಾವೆಲ್ಲರೂ ಪಣತೊಡಬೇಕೆಂದು ಆಡಿದ ಭಾಷಣದ ಕುರಿತು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಯಾದ ಸತ್ಯನಾರಾಯಣ ಹತ್ವಾರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಗೊಂಡ ಕಾಲೇಜಿನ ಎಲ್ಲಾ ಉಪನ್ಯಾಸಕ ಮತ್ತು ಉಪನ್ಯಾಸಕೇತರ ಸಿಬ್ಬಂದಿಗಳು ಎನ್.ಎಸ್.ಎಸ್, ಎನ್. ಸಿ. ಸಿ,ನೇವಿ, ರೂವರ್ಸ್, ರೆಂಜರ್ಸ್ ವಿದ್ಯಾರ್ಥಿಗಳು ನೆರೆದಿದ್ದರು.