ಶಿಕ್ಷಣ

ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕೆಲವು ನಿಯಮ ಬದಲಾವಣೆ ವಿರೋಧಿಸಿ  ವಿದ್ಯಾರ್ಥಿಗಳಿಂದ ಪ್ರತಿಭಟನೆ

Views: 129

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೆಲವು ನಿಯಮ ಬದಲಾವಣೆ ಮಾಡಿರುವುದರಿಂದ ತೊಂದರೆಯಾಗುತ್ತಿದ್ದು, ನಿಯಮ ಸಡಿಲಗೊಳಿಸುವಂತೆ ಹಿಂದೆ ಇದ್ದ ನಿಯಮಗಳನ್ನೇ ಮುಂದುವರಿಸುವಂತೆ ಆಗ್ರಹಿಸಿ  ವಿದ್ಯಾರ್ಥಿಗಳು  ಪ್ರತಿಭಟನೆ ನಡೆಸಿದರು.

ಕಾಲೇಜಿನಲ್ಲಿ ಅವಧಿ ಮಧ್ಯದಲ್ಲಿ ತರಗತಿಗೆ ರಜೆ ಹಾಕಲು, ಬೆಳಿಗ್ಗೆ ತಡವಾಗಿ ತರಗತಿಗೆ ತೆರಳಲು ಮೊದಲಿನಿಂದಲೂ ಅನುಮತಿ ಇದೆ. ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಇದ್ದು, ಎಲ್ಲಾ ದಿನವೂ ಸರಿಯಾದ ಸಮಯಕ್ಕೆ ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ. ದೂರದ ಪ್ರದೇಶದಿಂದ ಬರುವವರಿಗೆ ಕೆಲವೊಮ್ಮೆ ಮೊದಲ ತರಗತಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ನಿಯಮ ಬದಲಾವಣೆ ಮಾಡಿರುವುದರಿಂದ ಅದು ಸಾಧ್ಯವಾಗುವುದಿಲ್ಲ. ಇನ್ನು ತುರ್ತು ಕೆಲಸಕ್ಕೆ ಒಂದು ತರಗತಿಗೆ ರಜೆ ಹಾಕಿ ಹೋಗಲು, ಲೈಬ್ರೆರಿಗೆ ಹೋಗಲು, ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ. ಕಾಲೇಜು ಆಡಳಿತ ಮಂಡಳಿ ಏಕಾಏಕೀ ನಿಯಮ ಬದಲಾವಣೆ ಮಾಡಿರುವುದರಿಂದ ವಿದ್ಯಾರ್ಥಿಗಳಿಗೆ ಅತೀವ ತೊಂದರೆಯಾಗಿದೆ. ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರಿಗೆ ದಿಕ್ಕಾರ ಕೂಗಿ ಹಿಂದೆ ಇದ್ದ ನಿಯಮಗಳನ್ನೇ ಮುಂದುವರಿಸುವಂತೆ ಆಗ್ರಹಿಸಿದರು.

 

Related Articles

Back to top button