ಕುಂದಾಪುರ: ಬೇಳೂರಿನ ಸರಕಾರಿ ಶಾಲೆಗೆ ಟ್ರಸ್ಟ್ ಹೆಸರಿನಲ್ಲಿ ವಂಚನೆ;12 ಮಂದಿ ವಿರುದ್ದ ಕೇಸ್
Views: 283
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ತಾಲೂಕಿನ ಬೇಳೂರಿನ ಸರ್ಕಾರಿ ಶಾಲೆಗೆ ಎಜ್ಯುಕೇಶನ್ ‘ಟ್ರಸ್ಟ್ ಹೆಸರಿನಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ದೇಣಿಗೆ ಪಡೆದು ವಂಚಿಸಿದ ಪ್ರಕರಣ ನಡೆದಿದೆ.
ಎಜ್ಯುಕೇಶನ್ ‘ಟ್ರಸ್ಟ್ ಹೆಸರಿನಲ್ಲಿ ಸುಳ್ಳು ಟ್ರಸ್ಟ್ ಡೀಡುಗಳನ್ನು ನೋಂದಾಯಿಸಿಕೊಂಡು ಬೇಳೂರು ಗ್ರಾಮದ ವ್ಯಾಪ್ತಿಯ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ದೇಣಿಗೆ ಪಡೆದು, ಪ್ರತೀ ವರ್ಷ ಆಡಿಟ್ ಮಾಡದೆ, ಗ್ರಾಮ ಪಂಚಾಯತ್ ಕಟ್ಟಡವನ್ನೇ ಟ್ರಸ್ಟಿನ ಕಚೇರಿಯೆಂದು ಟ್ರಸ್ಟ್ ಡೀಡ್ ನಲ್ಲಿ ನಮೂದಿಸಿ, ಬೇಳೂರು ಪ್ರೌಢಶಾಲೆಯ ತರಗತಿಯ ಅವಧಿಯಲ್ಲಿ ಟ್ರಸ್ಟಿನ ಸಭೆಗಳನ್ನು ನಡೆಸಿ ಸರಕಾರದ ಸುತ್ತೋಲೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಚಾರ್ಮಕ್ಕಿ ಸಂಸ್ಥೆಯವರು ನೀಡಿದ ಬಸ್ಸನ್ನೇ ಟ್ರಸ್ಟ್ ನೀಡಿದ್ದೆಂದು ಹೇಳಿದ್ದಲ್ಲದೇ ಇಂಧನ ತುಂಬಿದ ಹಣವನ್ನೂ ನೀಡದೇ ಬಾಕಿ ಉಳಿಸಲಾಗಿದೆ. ಟ್ರಸ್ಟ್ನಲ್ಲಿ ಹಣಕಾಸಿನ ವಂಚನೆ ನಡೆದಿದೆ ಎಂದು ಸಭೆಯಲ್ಲಿ ಬಹಿರಂಗವಾದ ಬಳಿಕ 12 ಮಂದಿ ಮೇಲೆ ನ್ಯಾಯವಾದಿ ಅವಿನಾಶ್ ಶೆಟ್ಟಿ ಅವರು ದಾಖಲೆಗಳ ಸಮೇತ ಲಿಖಿತ ದೂರು ನೀಡಿದ್ದು,ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






