ಇತರೆ

ಕುಂದಾಪುರ: ಬಸ್ರೂರು ಏಕಾಂಗಿಯಾಗಿ ವಾಸವಾಗಿದ್ದ ವ್ಯಕ್ತಿ ಸಾವು 

Views: 150

ಕನ್ನಡ ಕರಾವಳಿ ಸುದ್ದಿ: ಏಕಾಂಗಿಯಾಗಿ ವಾಸವಾಗಿದ್ದ ವ್ಯಕ್ತಿಯೊಬ್ಬರು ಅಸೌಖ್ಯದಿಂದ ಸಾವನ್ನಪ್ಪಿದ್ದಾರೆ.

ಬಸ್ರೂರು ಗ್ರಾಮದ ಬಸವ (62) ಮೃತಪಟ್ಟವರು.

ಅವರ ಪತ್ನಿ, ಮಕ್ಕಳು ವಕ್ವಾಡಿಯಲ್ಲಿ ನೆಲೆಸಿದ್ದು, ಅವರು 30 ವರ್ಷಗಳಿಂದ ಏಕಾಂಗಿಯಾಗಿ ವಾಸವಾಗಿದ್ದರು. ನಿವೃತ್ತರಾಗಿದ್ದ ಅವರು 8 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಫೆ. 1ರಂದು ಅವರ ತಮ್ಮ, ತಂಗಿ ಮನೆಗೆ ಬಂದು ಔಷಧ ನೀಡಿದ್ದರು.ಸ್ವಲ್ಪ ಹೊತ್ತಿನ ಬಳಿಕ ಬಸವ ಅವರು ಅಸ್ವಸ್ಥರಾಗಿ ಒದ್ದಾಡಲಾರಂಭಿಸಿದರು. ಕೂಡಲೇ ಅವರನ್ನು ಕುಂದಾಪುರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದರು.ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!