ಶಿಕ್ಷಣ

ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಿಂದ ಸಂಪ್ರದಾಯಬದ್ಧ ಹೂವಿಕೋಲು ಪ್ರದರ್ಶನ

Views: 0

ಕುಂದಾಪುರ: ಭಾಗವತರ ಇಂಪಾದ ಪದ್ಯಕ್ಕೆ ಇಬ್ಬರು ಕಲಾವಿದರು ತರ್ಕ ಬದ್ದವಾಗಿ ಕುಳಿತಲ್ಲೇ ಅರ್ಥ ಹೇಳುತ್ತಾರೆ. ಮದ್ದಳೆ, ಹಾರ್ಮೋನಿಯಂ ಜೊತೆಗೆ ಮುಮ್ಮೇಳನದ ಬಾಲಕ-ಬಾಲಕಿಯರೊಂದಿಗೆ ಯಕ್ಷಗಾನದ ಜೋಡಿ ಸಂಭಾಷಣೆ ಇರುವ ಸಣ್ಣ ಸಣ್ಣ ಕತೆಯನ್ನು ಪ್ರಸ್ತುತ ಪಡಿಸುವ ಹೂವಿನ ಕೋಲಿನ ವೈಶಿಷ್ಟ ಉಡುಪಿ ಜಿಲ್ಲೆಯಾದ್ಯಂತ ನವರಾತ್ರಿಯಲ್ಲಿ ನಡೆಯುವ ಸಂಪ್ರದಾಯಬದ್ದವಾದ ಕಲೆಯಾಗಿದೆ.

ಇತ್ತೀಚೆಗೆ ಕುಂದಾಪುರ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಯಕ್ಷಗಾನ ಮತ್ತು ಕನ್ನಡ ಸಂಘದ ಆಶ್ರಯದಲ್ಲಿ ನವರಾತ್ರಿ ಪ್ರಯುಕ್ತ ಸಾಂಪ್ರದಾಯಿಕ ಹೂವಿನ ಕೋಲು ಪ್ರದರ್ಶನ ವಿದ್ಯಾರ್ಥಿಗಳಿಂದ  ಸಂಪ್ರದಾಯಬದ್ಧವಾಗಿ ನಡೆಯಿತು.

‘ಕೃಷ್ಣಾರ್ಜುನ’ ಪ್ರಸಂಗವನ್ನು ಆಯ್ಕೆ ಮಾಡಿಕೊಂಡು ಅರ್ಜುನನಾಗಿ ಅಂತಿಮ ಬಿ.ಎಸ್ಸಿ.ಯ ಲಕ್ಷ್ಮೀಕಾಂತ್ ಯು. ಶೆಟ್ಟಿ, ಕೃಷ್ಣನಾಗಿ ದ್ವಿತೀಯ ಬಿ.ಕಾಂ. (ಡಿ)ನ ಪವಿತ್ರ ಪೈ ಅರ್ಥ ಹೇಳಿದರು. ಭಾಗವತಿಕೆಯಲ್ಲಿ ದ್ವಿತೀಯ ಬಿ.ಸಿ.ಎ. (ಎ)ನ ಪೂಜಾ ಆಚಾರ್ ತೆಕ್ಕಟ್ಟೆ, ಚಂಡೆಯಲ್ಲಿ ಪ್ರಥಮ ಬಿಸಿಎ (ಬಿ) ವಿಭಾಗದ ಸಚಿನ್ ಆಚಾರ್ ಕುಂಭಾಶಿ, ಮದ್ದಳೆಯಲ್ಲಿ ತೃತೀಯ ಬಿ.ಸಿ.ಎ. ವಿಭಾಗದ ಸಾಕೇತ್ ಹೆಗಡೆ ಸಾಥ್ ನೀಡಿದರು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪಪ್ರಾಂಶುಪಾಲ ಹಾಗೂ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶ್ರೀ ಚೇತನ್ ಶೆಟ್ಟಿ ಕೋವಾಡಿ, ಸಹ ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ, ಯಕ್ಷಗಾನ ಸಂಘದ ಸಂಯೋಜಕರಾದ ಶ್ರೀ ರಕ್ಷಿತ್ ರಾವ್ ಗುಜ್ಜಾಡಿ, ಶ್ರೀ ಸುಹಾಸ್ ಜಟ್ಟಿಮನೆ, ಕನ್ನಡ ಸಂಘದ ಸಂಯೋಜಕರಾದ ಶ್ರೀಮತಿ ರೇಷ್ಮಾ ಶೆಟ್ಟಿ ಮತ್ತು ಶ್ರೀಮತಿ ವಿನಯಾ ವಿ. ಶೆಟ್ಟಿ ಉಪಸ್ಥಿತರಿದ್ದರು.

Related Articles

Back to top button