ಆರೋಗ್ಯ

ಕುಂದಾಪುರ ಆರ್.ಎನ್.ಶೆಟ್ಟಿ ಪ.ಪೂ. ಕಾಲೇಜು: ಯೋಗೋತ್ಸವದ ಪೂರ್ವಭಾವಿ ಸಭೆ, ಯೋಗ ಪ್ರಾತ್ಯಕ್ಷಿಕೆ

Views: 92

ಕುಂದಾಪುರ:ಉಡುಪಿ ಜಿಲ್ಲಾಡಳಿತ, ಉಡುಪಿ ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಉಡುಪಿ ಜಿಲ್ಲೆ, ತಾಲೂಕು ಆಯುಷ್ ಆಸ್ಪತ್ರೆ ಕುಂದಾಪುರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ , ಎನ್. ಎಸ್. ಎಸ್. ಘಟಕ- ಇವುಗಳ ಸಂಯುಕ್ತ ಆಶ್ರಯದಲ್ಲಿ ಯೋಗೋತ್ಸವದ ಪೂರ್ವಭಾವಿ ಸಭೆ ಮತ್ತು ಯೋಗ ಪ್ರಾತ್ಯಕ್ಷಿಕೆ ಕುಂದಾಪುರದ  ಆರ್.ಎನ್.ಶೆಟ್ಟಿ ಪ.ಪೂ. ಕಾಲೇಜಿನಲ್ಲಿ ನಡೆಯಿತು.

ಯೋಗಾಸನ, ಪ್ರಾಣಾಯಾಮಗಳ ಬಗ್ಗೆ ಅರಿವು ಮೂಡಿಸಲು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ.ಶಿಲ್ಪಾ. ಕೆ, ವೈದ್ಯಾಧಿಕಾರಿ, ತಾಲೂಕು ಆಯುಷ್ ಆಸ್ಪತ್ರೆ ಕುಂದಾಪುರ, ಇವರು ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣ ನೀಡುವುದರ ಜೊತೆಗೆ ದೈಹಿಕ ವ್ಯಾಯಾಮ ಮತ್ತು ಯೋಗ ಶಿಕ್ಷಣದ ಅಗತ್ಯ ಹಾಗೂ ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದೀಯ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಿದರು.

ಆ ಬಳಿಕ ದೈನಂದಿನ ಜೀವನಕ್ಕೆ ಬೇಕಾದ ಹಲವು ಸರಳ ಯೋಗಾಸನ- ಪ್ರಾಣಾಯಾಮಗಳ ಪ್ರಾತ್ಯಕ್ಷಿಕೆ ನೀಡಿದರು. ಈ ಸಂದರ್ಭದಲ್ಲಿ ಯೋಗ ಮತ್ತು ಆಯುರ್ವೇದ ಆಹಾರ ಕ್ರಮದ ವಿವರಗಳಿರುವ ಕರಪತ್ರವನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿ‌ ಸುಮತಿ ಶೆಣೈ ವಂದಿಸಿದರು.ಸಂಸ್ಕ್ರತ ವಿಭಾಗದ ಮುಖ್ಯಸ್ಥರಾದ ರವಿ ಉಪಾಧ್ಯ  ಕಾರ್ಯಕ್ರಮ ನಿರೂಪಿಸಿದರು.

 

Related Articles

Back to top button