ಶಿಕ್ಷಣ

ಕುಂದಾಪುರ: ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ‘ರಸ್ತೆ ಸುರಕ್ಷಾ ಸಪ್ತಾಹ ಜಾಗೃತಿ’ ಕಾರ್ಯಕ್ರಮ

ರಸ್ತೆ ಸುರಕ್ಷಾ ನಿಯಮ ಪಾಲನೆಯಿಂದ ಭಯ ಮುಕ್ತ ಸಮಾಜ ನಿರ್ಮಾಣ — ಜಯರಾಮ ಗೌಡ, ಸರ್ಕಲ್ ಇನ್ಸಪೆಕ್ಟರ್ ಕುಂದಾಪುರ 

Views: 151

ಕನ್ನಡ ಕರಾವಳಿ ಸುದ್ದಿ: ರಸ್ತೆ ಸುರಕ್ಷಾ ನಿಯಮನ್ನು ಪಾಲಿಸುವುದರಿಂದ ಸಾರ್ವಜನಿಕರು ಧೈರ್ಯದಿಂದ ಓಡಾಡಬಹುದು, ಅಪಘಾತ ಮುಕ್ತ ಸಮಾಜ ನಿರ್ಮಿಸಬಹುದು ಹಾಗೂ ಅಮಾಯಕರ ಸಾವು ನೋವುಗಳನ್ನು ತಡೆಗಟ್ಟಲು ಸಾಧ್ಯ. ಈ ನೆಲೆಯಲ್ಲಿ ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರು ರಸ್ತೆ ಸುರಕ್ಷತೆಗೆ ಸಂಬಂಧಿಸಿದ ನಿಯಮಗಳನ್ನು ಅಳವಡಿಸಿಕೊಂಡು ದೈನಂದಿನ ಚಟುವಟಿಕೆಯಲ್ಲಿ ಈ ನಿಯಮಗಳನ್ನು ಪಾಲಿಸಬೇಕು ಎಂದು ಕುಂದಾಪುರ ಸರ್ಕಲ್ ಇನ್ಸಪೆಕ್ಟರ್ ಜಯರಾಮ ಗೌಡರವರು ಹೇಳಿದರು.

ಅವರು ಸ್ಥಳೀಯ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ರಸ್ತೆ ಸುರಕ್ಷಾ ಸಪ್ತಾಹ ಜಾಗೃತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 

ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುವುದು ಸರಿಯಾದ ದಾಖಲೆಗಳಿಲ್ಲದೆ ವಾಹನ ಚಲಾಯಿಸುವುದು, ಅತಿವೇಗವಾಗಿ ಚಲಾಯಿಸುವುದು, ಮಾದಕ ದ್ರವ್ಯ ಸೇವಿಸಿ ವಾಹನ ಚಲಾಯಿಸುವುದು ಕಾನೂನು ಪ್ರಕಾರ ತಪ್ಪು ಈ ಕಾನೂನುಗಳನ್ನು ಉಲ್ಲಂಘಿಸದೇ ವಾಹನ ಸವಾರರು ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ನಿಯಮದ ಮಹತ್ವವನ್ನು ವಿವರಿಸಿದರು. ಪೊಲೀಸ್ ಕಾನ್ಸ್ಟೇಬಲ್ ಶ್ರೀ. ಗಿರೀಶರವರು, ಕಾಲೇಜಿನ ಬೋಧಕ ಹಾಗೂ ಬೋಧಕೇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related Articles

Back to top button
error: Content is protected !!