ಶಿಕ್ಷಣ

ಕುಂದಾಪುರ ಆರ್‌‌.ಎನ್‌.ಶೆಟ್ಟಿ ಪ.ಪೂ ಕಾಲೇಜು ಶೇ.99.15 ಫಲಿತಾಂಶ

Views: 83

ಕುಂದಾಪುರ ಆರ್.ಎನ್.ಶೆಟ್ಟಿ ಪ.ಪೂ ಕಾಲೇಜು 2023 -24 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 99.15 ಪಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ 475 ವಿದ್ಯಾರ್ಥಿಗಳಲ್ಲಿ 471 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 222 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ‌. 226 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಸುಹಾನಿ.ಎನ್ (588) ಅಂಕ ಗಳಿಸಿ ಮೊದಲ ಸ್ಥಾನಿಯಾಗಿದ್ದಾರೆ. ದಿಶಾ(587) ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ತೃಷಾ ಮತ್ತು ತನುಶ್ರೀ (584) ಅಂಕ ಗಳಿಸಿ ತೃತೀಯ ಸ್ಥಾನಿಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಸುರಕ್ಷಾ( 590) ಅಂಕಗಳಿಸಿ ಪ್ರಥಮ ಸ್ಥಾನಿಯಾಗಿದ್ದು, ಧನ್ಯಶ್ರೀ ಮತ್ತು ಮಹಿಮಾ (587) ಅಂಕಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಸಾಕ್ಷಿ( 586) ಅಂಕಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ಉನ್ನತ ಸಾಧನೆಗೈದು ಕಾಲೇಜಿಗೆ ಕೀರ್ತಿತಂದ ವಿದ್ಯಾರ್ಥಿಗಳನ್ನು ಕುಂದಾಪುರ ಎಜುಕೇಶನ್ ಸೊಸೈಟಿ ಸಂಚಾಲಕರಾದ ಶ್ರೀ ಬಿ.ಎಂ ಸುಕುಮಾರ್ ಶೆಟ್ಟಿ ,ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ನವೀನ್ ಕುಮಾರ್ ಶೆಟ್ಟಿ  ಹಾಗೂ ಉಪನ್ಯಾಸಕ ವೃಂದದವರು ಅಭಿನಂದಿಸಿದ್ದಾರೆ.

Related Articles

Back to top button