ಕುಂದಾಪುರ ಆರ್‌ಎನ್.ಶೆಟ್ಟಿ ಪ.ಪೂ ಕಾಲೇಜು: ಹಳೆ ವಿದ್ಯಾರ್ಥಿ ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗ ಇವರಿಗೆ ಸನ್ಮಾನ

Views: 42
ಕುಂದಾಪುರ:ಎಂಜಿನಿಯರಿಂಗ್, ಮೆಡಿಕಲ್ ಅಥವಾ ಇನ್ಯಾವುದೇ ವಾಣಿಜ್ಯ, ತಾಂತ್ರಿಕ ಕ್ಷೇತ್ರದಲ್ಲಿ ವ್ಯಾಸಂಗ ಮಾಡಿದವರೂ ಕೂಡ ಸೈನ್ಯವನ್ನು ಸೇರಿ ಸೇವೆ ಸಲ್ಲಿಸಬಹುದು. ಆಗ ಅದು ಶ್ರೇಷ್ಠವಾದ ದೇಶಸೇವೆಯಾಗುವುದೇ ಹೊರತು ವ್ಯಕ್ತಿಗತವಾದ ಹುದ್ದೆಯಾಗಿರುವುದಿಲ್ಲ. ಈ ನಿಟ್ಟಿನಲ್ಲಿ ನನ್ನ ಏಳಿಗೆಗೆ ಕಾರಣವಾದ ಆರ್.ಎನ್.ಎಸ್ ಪಿ.ಯು.ಕಾಲೇಜಿಗೆ ಕೃತಜ್ಞನಾಗಿದ್ದೇನೆ ಎಂದು ಭಾರತೀಯ ಭೂಸೈನ್ಯದಲ್ಲಿ ಲೆಫ್ಟಿನೆಂಟ್ ಹುದ್ದೆಗೆ ನೇಮಕಾತಿ ಹೊಂದಿದ ಕಾಲೇಜಿನ ಹೆಮ್ಮೆಯ ಹಳೆ ವಿದ್ಯಾರ್ಥಿ ಭರತ್ ಬಾಬು ದೇವಾಡಿಗ ರವರು ಕಾಲೇಜಿನ ವತಿಯಿಂದ ಹಮ್ಮಿಕೊಂಡ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು, ಅತ್ಯಂತ ಕಠಿಣವಾದ ಭಾರತೀಯ ಸೇನಾ ಹುದ್ದೆಯಲ್ಲಿ ಭರತ್ ಬಾಬುರವರು ತಮ್ಮ ಪರಿಶ್ರಮ ಮತ್ತು ದಕ್ಷತೆಯಿಂದ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು. ಉಪ ಪ್ರಾಂಶುಪಾಲರಾದ ಶ್ರೀ ಪ್ರೀತೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕಿ ದೀಪ್ತಿ ಕೆ ಸ್ವಾಗತಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಜಯಶೀಲಾ ಪೈ ಅತಿಥಿ ಪರಿಚಯ ನೀಡಿದರು. ಕಾಲೇಜಿನ ಉಪನ್ಯಾಸಕಿಯರು ಲೆಫ್ಟಿನೆಂಟ್ ಭರತ್ ಬಾಬು ದೇವಾಡಿಗ ರವರಿಗೆ ಆರತಿ ಬೆಳಗಿ ಶುಭ ಹಾರೈಸಿದರು. ಸಂಖ್ಯಾಶಾಸ್ತ್ರ ಉಪನ್ಯಾಸಕಿ ಅರುಣಾ ಹೊಳ್ಳ ಧನ್ಯವಾದ ಸಲ್ಲಿಸಿದರು. ಇಂಗ್ಲೀಷ್ ವಿಬಾಗದ ಮುಖ್ಯಸ್ಥೆ ವನಿತಾ. ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.