ಕುಂದಾಪುರ:ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಸುಣ್ಣಾರಿ: ವಿದ್ಯಾರ್ಥಿ ಪೋಷಕ ಮತ್ತು ಶಿಕ್ಷಕರ ಸಭೆ

Views: 85
ಕುಂದಾಪುರ: ಎಕ್ಸಲೆಂಟ್ ಪದವಿಪೂರ್ವ ಕಾಲೇಜ್ ಸುಣ್ಣಾರಿ ಇದರ ಪ್ರಸ್ತುತ ಸಾಲಿನ PCMC ಮತ್ತು PCMB ವಿಭಾಗದ ವಿದ್ಯಾರ್ಥಿ ಪೋಷಕರ ಮತ್ತು ಬೋಧಕರ ಸಭೆ ನಡೆಯಿತು.
ಬದುಕುವ ದಾರಿ ಮತ್ತು ಬದುಕುವ ರೀತಿಗೆ ಹೆಸರಾದ ನಮ್ಮೀ ಶಿಕ್ಷಣ ಸಂಸ್ಥೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳನ್ನು ವೈದ್ಯರಾಗಿ, ಇಂಜಿನಿಯರ್ ಆಗಿ ನೋಡಬೇಕು ಎನ್ನುವುದು ನಮ್ಮ ಸ್ಥಾಪಕರ ಕನಸ್ಸನ್ನು ನನಸಾಗಿಸೋಣ ಎಂದುಎಕ್ಸಲೆಂಟ್ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲರಾದ ನಾಗರಾಜ್ ಶೆಟ್ಟಿ ಹೇಳಿದರು.
PCMB ಮತ್ತು PCMC ವಿದ್ಯಾರ್ಥಿ ಪೋಷಕರ ಮತ್ತು ಶಿಕ್ಷಕರ ಸಭೆಯನ್ನು ಉದ್ದೇಶಿಸಿ ಮಾತಾಡಿದ ಅವರು ವರ್ಷದಲ್ಲಿ ಹಿಂದಿನಂತೆ ಎಲ್ಲಾ ಭೋದಕರು ಲಭ್ಯರಿರುತ್ತಾರೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಎಕ್ಸಲೆಂಟ್ ವಿದ್ಯಾ ಸಂಸ್ಥೆ ಕಳೆದ ಬಾರಿ 7 ರಾಂಕ್ ಪಡೆದರೆ ಈ ಬಾರಿ 17 ರಾಂಕ್ ಪಡೆದಿದೆ. ಸಂಸ್ಥೆಯಲ್ಲಿನ ನಿಯಮಾವಳಿಗಳಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳುವ ಜೊತೆಗೆ ಪಾಲಕರು ಕೂಡ ಮಕ್ಕಳ ಪರವಾಗಿ ಯಾವುದೇ ರೀತಿಯ ಒತ್ತಡ ತರಬಾರದಾಗಿ ವಿನಂತಿಸಿದರು.
ಇಲ್ಲಿ ಕಲಿತ ಪ್ರತಿ ವಿದ್ಯಾರ್ಥಿಯೂ ಕೂಡ ಉನ್ನತ ಸ್ಥಾನ ಪಡೆದು ಪೋಷಕರಿಗೂ ಹಾಗೂ ನಮ್ಮ ವಿದ್ಯಾ ಸಂಸ್ಥೆಗೆ ಶ್ರೇಯಸ್ಸನ್ನು ನೀಡುವುದ್ದರೊಂದಿಗೆ ಇಲ್ಲಿನ ಶಿಸ್ತು ಮಾತು ನಿಯಮಗಳಿಗೆ ಬದ್ಧರಾಗಿರಬೇಕು ಎಂದರು. ಅಲ್ಲದೇ ಸರ್ಕಾರಿ ಶಾಲೆಯಲ್ಲಿ ಓದಿ 600 ಅಂಕ ಪಡೆದ 50 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದರು.