ಧಾರ್ಮಿಕ
ಕಾಳಾವರ ಷಷ್ಠಿಯಲ್ಲಿ ಪಂಕ್ತಿಬೇದ ನಿಷೇಧಕ್ಕೆ ಗ್ರಾಮ ಪಂಚಾಯತ್ ಪತ್ರ

Views: 330
ಕುಂದಾಪುರ: ಕರಾವಳಿಯ ಪ್ರಸಿದ್ಧ ಕ್ಷೇತ್ರವಾದ ಎರಡನೇ ಸುಬ್ರಹ್ಮಣ್ಯ ಕ್ಷೇತ್ರ ಎಂದೇ ಖ್ಯಾತವಾದ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ (ಸುಬ್ರಹ್ಮಣ್ಯ) ಷಷ್ಠಿ ಉತ್ಸವದಲ್ಲಿ ಪಂಕ್ತಿಬೇದ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಿಂದಿನ ವರ್ಷದ ಜಾತ್ರೆಯಲ್ಲಿ ಮೌಕಿಕವಾಗಿ ತಿಳಿಸಿರುವ ದೂರಿನ ಅನ್ವಯ ಈ ಕುರಿತು ದೇಗುಲದ ಆಡಳಿತ ಮಂಡಳಿ ಮೊಕ್ತೇಸರರಿಗೆ ಮತ್ತು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಕಾಳಾವರ ಗ್ರಾಮ ಪಂಚಾಯತ್ ಪತ್ರ ಬರೆದಿದ್ದಾರೆ.
ಈ ವರ್ಷ ನಡೆಯಲಿರುವ ವಾರ್ಷಿಕ ಷಷ್ಠಿ ಮಹೋತ್ಸವದಲ್ಲಿ ಪಂಕ್ತಿಬೇದ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.






