ಶಿಕ್ಷಣ

ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ

Views: 0

ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ

ಹಿಂದಿನ ಬಿಜೆಪಿ ಅವಧಿಯಲ್ಲಿ ಮಾಡಲಾಗಿದ್ದ ಪಠ್ಯಪುಸ್ತಕಗಳ ಪುನರ್ ಪರಿಶೀಲನೆಯನ್ನು ರದ್ದುಪಡಿಸಿ, ಅದಕ್ಕೂ ಹಿಂದಿನ ಪ್ರೊ.ಬರಗೂರು ರಾಮಚಂದ್ರಪ್ಪನವರು ಪರಿಷ್ಕರಣೆ ಮಾಡಿದ್ದ ಪಠ್ಯಪುಸ್ತಕಗಳನ್ನು ಬೋಧಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕನ್ನಡ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ವಿಷಯಗಳ ಬದಲಾವಣೆ ಮಾಡಲಾಗಿದ್ದು, ಪಠ್ಯದಿಂದ ಕೈಬಿಡುವ ಪಾಠಗಳ ಬಗ್ಗೆ ಅಧಿಕೃತವಾಗಿ ಸುತ್ತೋಲೆ ಹೊರಡಿಸಲಾಗಿದೆ.

ಕನ್ನಡ ಮತ್ತು ಸಮಾಜ ವಿಜ್ಞಾನದ 9 ಪಾಠಗಳಿಗೆ ಕೋಕ್ ನೀಡಲಾಗಿದೆ. ನಿಜವಾದ ಆದರ್ಶ ಪುರುಷ ಯಾರಾಗಬೇಕು ಎನ್ನುವ ಪಠ್ಯವನ್ನು ಕೈ ಬಿಡಲಾಗಿದೆ .ಕೇಶವ ಬಲರಾಮ್ ಹೆಗಡೆವಾರ್ ಬರೆದಿದ್ದ ಗದ್ಯವನ್ನ ಕೈ ಬಿಡಲಾಗಿದೆ . ಚಕ್ರವರ್ತಿ ಸೂಲಿಬೆಲೆ ಅವರ ತಾಯಿ ಭಾರತೀಯ ಅಮರ ಪುತ್ರರು ಪಾಠಕ್ಕೆ ಕತ್ತರಿ ಹಾಕಲಾಗಿದೆ. ಶತಾವಧಾನಿ ಆರ್ ಗಣೇಶ್ ಗದ್ಯವನ್ನ ರಾಜ್ಯ ಸರ್ಕಾರ ಕೈಬಿಟ್ಟಿದೆ.

ಶ್ರೇಷ್ಠ ಭಾರತೀಯ ಚಿಂತನೆಗಳು ಪಾಠವನ್ನು ತೆಗೆಯಲಾಗಿದೆ. ನಿರ್ಮಲ ಸುರತ್ಕಲ್ ರಾಮಚಂದ್ರ ಆಚಾರ್ಯ ಅವರ ಪಾಠ, ಪಾರಂಪಳ್ಳಿ ನರಸಿಂಹ ಐತಾಳ್, ಲಕ್ಷ್ಮೀಶ,  ಕೆ.ಟಿ.ಗಟ್ಟಿ, ಸತ್ಯನಾರಾಯಣ ಭಟ್ಟರ ಗದ್ಯಕ್ಕೂ ಸರಕಾರ ಕತ್ತರಿ ಹಾಕಿದೆ.

ಸೇರ್ಪಡೆಯಲ್ಲಿ ಸಾವಿತ್ರಿಬಾಯಿಫುಲೆ ,ನೆಹರು , ಅಂಬೇಡ್ಕರ್, ಅವರ ಪಠ್ಯಗಳನ್ನು ಸೇರ್ಪಡೆ ಮಾಡಲಾಗಿದೆ. ಸುಕುಮಾರಸ್ವಾಮಿ ಕುರಿತ ಪಠ್ಯ, ಸಾರಾ ಅಬೂಬಕ್ಕರ್, ವನಮಾನ ರಂಗನಾಥ್ ,ವಾಲ್ಮೀಕಿ, ಉರುಸ್ ಗಳಲ್ಲಿ ಭಾವೈಕ್ಯತೆ ಪಾಠವನ್ನು ಸೇರ್ಪಡೆ ಮಾಡಲಾಗಿದೆ.

ವೇದಕಾಲದ ಸಂಸ್ಕೃತಿ ಹೊಸ ಧರ್ಮಗಳ ಉದಯ ಮಿರ್ಜಾ ಇಸ್ಮಾಯಿಲ್, ವಿಶ್ವೇಶ್ವರಯ್ಯ, ಒಡೆಯರ್ ಪಾಠಗಳನ್ನು ಸೇರ್ಪಡೆ ಮಾಡಲಾಗಿದೆ.

ಇವುಗಳ ಬೋಧನೆಗೆ ಸಪ್ಲಿಮೆಂಟರಿ ಪುಸ್ತಕಗಳನ್ನು ಪೂರೈಸಲು ಸರ್ಕಾರ ಮುಂದಾಗಿದೆ.

Related Articles

Back to top button