ಒಂದನೇ ತರಗತಿ ಬಾಲಕ ಶಿವಮೊಗ್ಗ ದೊಡ್ಡಪೇಟೆ ಠಾಣಾ ಇನ್ಸ್ಪೆಕ್ಟರ್..!

Views: 18
ಎಂಟು ವರ್ಷದ ಬಾಲಕ ಶಿವಮೊಗ್ಗ ದೊಡ್ಡಪೇಟೆ ಪೋಲೀಸ್ ಠಾಣಾ ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿದ್ದಾನೆ.
ಅಧಿಕಾರ ಸ್ವೀಕರಿಸಿದ ಬಳಿಕ ಸಿಬ್ಬಂದಿಗಳಿಗೆ ಕರ್ತವ್ಯದ ಬಗ್ಗೆ ಪಾಠ ಹೇಳಿದ್ದಾನೆ. ಕಳ್ಳನಿಗೆ ಬುದ್ಧಿವಾದ ಹೇಳಿ ಇನ್ನು ಮುಂದೆ ಇಂಥಹ ಕೆಲಸ ಮಾಡಬಾರದು. ಇನ್ನು ಸರಿ ದಾರಿಗೆ ಬರುವಂತೆ ಹೇಳಿದ್ದಾನೆ.

ಶಿವಮೊಗ್ಗ ಸೂಳೆಬೈಲು ನಿವಾಸಿ ತಬ್ರೇಜ್ ಖಾನ್ ಅವರ ಪುತ್ರ ಒಂದನೇ ತರಗತಿಯಲ್ಲಿ ಓದುತ್ತಿರುವ ಅಜಾನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಒಂದು ಗಂಟೆ ಜವಾಬ್ದಾರಿ ನಿಭಾಯಿಸಿದ ಸಂದರ್ಭದಲ್ಲಿ ಜಿಲ್ಲಾ ಪೊಲೀಸರು ಸಾಕ್ಷಿಯಾದರು.
ಅಜಾನ್ ಖಾನ್ ಬಾಲಕ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ನಾನು ದೊಡ್ಡವನಾದ ಮೇಲೆ ಪೋಲಿಸ್ ಆಗಬೇಕೆಂಬ ಆಸೆಯನ್ನು ಹೊಂದಿದ್ದನು. ಆತನ ಆಸೆಯನ್ನು ನೆರವೇರಿಸಲು ಪೋಷಕರು ಜಿಲ್ಲಾ ಪೊಲೀಸ್ ಅಧಿಕಾರಿ ಮಿಥುನ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡಾಗ ಬಾಲಕನ ಕಾಳಜಿಗೆ ವಿಶೇಷವಾಗಿ ಸ್ಪಂದಿಸಿ ಠಾಣೆಯ ಇನ್ಸ್ಪೆಕ್ಟರ್ ಆಗಿ ಅಧಿಕಾರ ಕೊಟ್ಟು ನೋಡಿದರು.
ಬಾಲಕನ ತಂದೆ ಮಾತನಾಡಿ, ನನ್ನ ಮಗನಿಗೆ ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆ ಇದೆ. ಆತನ ಹೃದಯ ಬೆಳೆದಿಲ್ಲ, ವೈದ್ಯರಿಗೆ ತೋರಿಸಿದಾಗ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ, ಹೃದಯ, ಶ್ವಾಸಕೋಶ ಕಸಿ ಮಾಡಬೇಕು ಎಂದಿದ್ದಾರೆ. ಮಗನ ಆಸೆಯನ್ನು ಈಡೇರಿಸಿದ ಪೊಲೀಸರಿಗೆ ಧನ್ಯವಾದಗಳನ್ನು ಅರ್ಪಿಸಿದರು.






