ಎಸ್‌ಎಸ್‌ಎಲ್‌ಸಿ ಪರೀಕ್ಷೆ -1ರ ಕೀ ಉತ್ತರ ಪರಿಶೀಲಿಸಲು ಹೀಗೆ ಮಾಡಿ..

Views: 42
ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ವಿಷಯವಾರು ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಈ ಉತ್ತರಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಜತೆಗೆ ಈ ಮಾದರಿ ಉತ್ತರಗಳ ಮೇಲೆ ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಅವಕಾಶವನ್ನು ನೀಡಿದೆ
ಈ ಕುರಿತು ಪ್ರಕಟಣೆಯನ್ನು ಹೊರಡಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಕೀ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಲಿಂಕ್ ಸಹ ತೆರೆಯಲಾಗಿದೆ ಎಂದು ತಿಳಿಸಿದೆ. ಆಕ್ಷೇಪಗಳನ್ನು ಏಪ್ರಿಲ್ 8ರ ಸಂಜೆ 5 ಗಂಟೆಯೊಳಗೆ ಮಂಡಲಿಯ ವೆಬ್‌ಸೈಟ್ ಮೂಲಕ ಸಲ್ಲಿಸಬೇಕು ಎಂದೂ ಸೂಚಿಸಿದೆ. ಈ ಮಾಹಿತಿಯನ್ನು ತಮ್ಮ ಜಿಲ್ಲೆಯ ವಿದ್ಯಾರ್ಥಿಗಳು / ಶಿಕ್ಷಕರಿಗೆ ತಿಳಿಸುವಂತೆ ಹೇಳಿದೆ. ನಿಗದಿತ ದಿನಾಂಕದ ನಂತರ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಮಂಡಲಿ ಪರಿಗಣಿಸುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಆಕ್ಷೇಪಣೆ ಸಲ್ಲಿಸಲು ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ರಿಜಿಸ್ಟರ್ ನಂಬರ್ ಕಡ್ಡಾಯ. ಈ ರಿಜಿಸ್ಟರ್ ನಂಬರ್ ನಮೂದಿಸುವ ಮೂಲಕ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಮೊದಲೇ ಹೇಳಿದಂತೆ ಆಕ್ಷೇಪಣೆ ಸಲ್ಲಿಸಲು ಆನ್‌ಲೈನ್ ಮೂಲಕ ಮಾತ್ರ ಅವಕಾಶ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕೀ ಉತ್ತರ ಪಡೆಯುವ ವಿಧಾನ
ಕೀ ಉತ್ತರ ಪಡೆಯಲು ಅಧಿಕೃತ ವೆಬ್‌ಸೈಟ್ https://kseab.karnataka.gov.in/ಗೆ ಭೇಟಿ ನೀಡಿ.
ಅಥವಾ ಇಲ್ಲಿ ಕ್ಲಿಕ್ ಮಾಡಿ.
ಈಗ ತೆರೆದುಕೊಳ್ಳುವ ಪುಟದಲ್ಲಿ 2023-24ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಉತ್ತರ ಕೀಲಿಗಾಗಿ ಮತ್ತು ಮಾದರಿ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ನಂತರ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ.
ಅದರಲ್ಲಿ CLICK HERE FOR SSLC 2024 EXAM -1 KEY ANSWERS ಎಂದಿರುವ ಆಯ್ಕೆ ಸೆಲೆಕ್ಟ್ ಮಾಡಿ.
ನಂತರ ಎಲ್ಲ ವಿಷಯಗಳ ಕೀ ಉತ್ತರಗಳ ಪಿಡಿಎಫ್ ಪಟ್ಟಿ ಕಾಣಿಸುತ್ತದೆ. ಬೇಕಾದ ವಿಯದ ಮೇಲೆ ಕ್ಲಿಕ್ ಮಾಡಿದರೆ ಓಪನ್ ಆಗುತ್ತದೆ.
ಅವುಗಳನ್ನು ಡೌನ್‌ಲೋಡ್ ಮಾಡಿಕೊಂಡು ಚೆಕ್ ಮಾಡಿಕೊಳ್ಳಿ.
ಆಕ್ಷೇಪಣೆ ಸಲ್ಲಿಸುವ ವಿಧಾನ
ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಈಗ ತೆರೆದುಕೊಳ್ಳುವ ಪುಟದಲ್ಲಿ 2023-24ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಉತ್ತರ ಕೀಲಿಗಾಗಿ ಮತ್ತು ಮಾದರಿ ಉತ್ತರಗಳಿಗೆ ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
Online Objection Entry ಆಯ್ಕೆಯ ಕೆಳಗೆ ನೋಂದಣಿ ಸಂಖ್ಯೆ ನಮೂದಿಸಿ ʼViewʼ ಆಯ್ಕೆಯನ್ನು ಕ್ಲಿಕ್ ಮಾಡಿ.