ರಾಜಕೀಯ

ಉಡುಪಿ-ಚಿಕ್ಕಮಗಳೂರ: ಕೊನೆಯ ಕ್ಷಣದಲ್ಲಿ ಕೆ.ಜಯಪ್ರಕಾಶ್ ಹೆಗ್ಡೆ ಪರ ವ್ಯಾಪಕ ಅಲೆ – 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲ್ಲಿದ್ದಾರೆ :ಎಂ.ರಮೇಶ್ ಶೆಟ್ಟಿ

Views: 34

ಚಿಕ್ಕಮಗಳೂರು ಈ ಬಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಪರ ವ್ಯಾಪಕ ಅಲೆ ಬೀಸುತ್ತಿದೆ. ಕ್ಷೇತ್ರದಲ್ಲಿನ ಜನರ ನಾಡಿಮಿಡಿತ ಗಮನಿಸಿದರೆ ಈ ಸಾರಿ ಹೆಗ್ಡೆಯವರು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲ್ಲಿದ್ದಾರೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಗೆ ಸ್ಫರ್ದಿಸಿದ್ದ ಎಂ.ರಮೇಶ್ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಡುಪಿ-ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ವ್ಯಾಪಕ ಪ್ರಚಾರ ನಡೆಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಕ್ಷೇತ್ರದಲ್ಲಿ ಜಯಪ್ರಕಾಶ್ ಹೆಗ್ಡೆಯವರ ಸಜ್ಜನಿಕೆ, ಪ್ರಾಮಾಣಿಕತೆ, ಅಧಿಕಾರದಲ್ಲಿ ಇರಲಿ ಬಿಡಲಿ ಜನರ ಸಂಕಷ್ಟಗಳಿಗೆ ಕೂಡಲೇ ಸ್ಪಂಧಿಸುವ ಗುಣ, ಎಷ್ಡೇ ಹೊತ್ತಿನಲ್ಲಿಯೂ ಅವರ ಮೊಬೈಲ್ ಗೆ ಕರೆ ಮಾಡಿದರೆ ಕರೆ ಸ್ವೀಕರಿಸಿ, ಅವರ ಸಮಸ್ಯೆಗಳನ್ನು ಖುದ್ದು ಆಲಿಸಿ, ಕೆಲಸವಾದ ನಂತರ ವಾಪಾಸ್ಸು ಕರೆ ಮಾಡಿ ತಿಳಿಸುವ ಗುಣಗಳು ಚುನಾವಣೆಯಲ್ಲಿ ಇವರನ್ನು ಗೆಲುವಿನ ಹತ್ತಿರ ತೆಗೆದುಕೊಂಡು ಹೋಗಿದೆ.

ಸಂಸದರಾಗಿ ಅವರ ಕ್ಷೇತ್ರದಲ್ಲಿ ಮಾಡಿರುವ ಕೆಲಸಗಳು, ಮೀನುಗಾರಿಕೆ ಸಚಿವರಾಗಿದ್ದಾಗ ಕರಾವಳಿ ಭಾಗದ ಮೀನುಗಾರರಿಗೆ, ಕರಾವಳಿ ಭಾಗದ ಜನರಿಗೆ ಮಾಡಿರುವ ಸಹಾಯವನ್ನು ಅಲ್ಲಿನ ಮತದಾರರು ಕೃತಜ್ಞತೆಯಿಂದ ನೆನೆಸುತ್ತಾರೆ ಮತ್ತು ಅವರನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟಿದ್ದಾರೆ ಎಂದು ರಮೇಶ್ ತಿಳಿಸಿದರು.

ಜಯಪ್ರಕಾಶ್ ಹೆಗ್ಡೆಯವರ ವೈಯಕ್ತಿಕ ವರ್ಚಸ್ಸು, ಸರ್ಕಾರ ಚುನಾವಣೆ ಮುಂಚೆ ನೀಡಿರುವ 5 ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ಈಡೇರಿಸಿರುವುದು, ಪುನ: ಕೇಂದ್ರದಲ್ಲಿ ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು ನೂರಕ್ಕೆ ನೂರರಷ್ಟು ಹೆಗ್ಡೆಯವರನ್ನು ಚುನಾವಣೆತಯ ಜಯದ ಹೊಸ್ತಿಲಲ್ಲಿ ತಂದು ನಿಲ್ಲಿಸಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಶಾಸಕರಿದ್ದು, ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ ಒಂದೂವರೆ ಲಕ್ಷಕ್ಕೂ ಅಧಿಕ ಬಹುಮತವನ್ನು ಕಾಂಗ್ರೆಸ್ ಅಭ್ಯರ್ಥಿ ಪಡೆಯಲ್ಲಿದ್ದಾರೆ. ಕುಂದಾಪುರ, ಬ್ರಹ್ಮಾವರ, ಹೆಬ್ರಿ, ಕಾಪು ಹಾಗೂ ಕಾರ್ಕಳ ಭಾಗಗಳಲ್ಲೂ ಬಿಜೆಪಿಗಿಂತ ಅಧಿಕ ಮತಗಳನ್ನು ಹೆಗ್ಡೆಯವರು ಪಡೆಯಲ್ಲಿದ್ದಾರೆಂದು ರಮೇಶ್ ಶೆಟ್ಟಿಯವರು ಅಚಲವಾದ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related Articles

Back to top button
error: Content is protected !!