ಕರಾವಳಿ

ಉಡುಪಿ:ವಿಪರೀತ ಸೆಖೆಯೆಂದು ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಉರುಳಿ ಕೆಳಕ್ಕೆ ಬಿದ್ದು ಸಾವು!

Views: 506

ಉಡುಪಿ‌‌: ವಿಪರೀತ ಸೆಖೆಯ ಹಿನ್ನಲೆ ಮನೆಯ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ.

ಮೃತಪಟ್ಟವರನ್ನು ಅಜೆಕಾರು ಆಶ್ರಯನಗರ ನಿವಾಸಿ ಸುಂದರ ನಾಯ್ಕ್ ( 55) ಎಂದು ಗುರುತಿಸಲಾಗಿದೆ.

ಸುಂದರ ನಾಯ್ಕ್ ಕಾರ್ಕಳ ತಾಲೂಕಿನ ಎಣ್ಣೆ ಹೊಳೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಸುಮಾರು 10:30 ರ ವೇಳೆಗೆ ಟೆರೇಸ್ ಮೇಲೆ ಮಲಗಲು ತೆರಳಿದ್ದರು. ಬೆಳಿಗ್ಗೆ 6:30 ವೇಳೆಗೆ ಗಮನಿಸಿದಾಗ ಟೆರೇಸ್ ಮೇಲಿಂದ ಕೆಳಗೆ ಬಿದ್ದಿರೋದು ಬೆಳಕಿಗೆ ಬಂದಿದೆ.

ಗಾಢ ನಿದ್ರೆಯಲ್ಲಿ ಆಯತಪ್ಪಿ ಟೆರೇಸ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ. ಇನ್ನು ನೆಚ್ಚಿನ ಶಾಲಾ ಶಿಕ್ಷಕ ಸಾವನ್ನಪ್ಪಿದ ಸಂಗತಿ ತಿಳಿದು ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Related Articles

Back to top button
error: Content is protected !!