ಈ ಬಾರಿ ನಿರೀಕ್ಷೆಗೂ ಮೊದಲೇ ಬೇಸಿಗೆ ಆರಂಭ… ಮಳೆ ಮುನ್ಸೂಚನೆ ಇಲ್ಲ!
Views: 72
ಕನ್ನಡ ಕರಾವಳಿ ಸುದ್ದಿ: ಮಂಗಳೂರು ಸೇರಿದಂತೆ ಕರಾವಳಿ ತೀರದಲ್ಲಿ ತೇವಾಂಶ ಭರಿತ ಹವಾಮಾನವಿದ್ದು, ಸೆಖೆಯ ಅನುಭವವಾಗಲಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಮುಂಜಾನೆ ಮಂಜಿನ ಮುಸುಕು ಇರಲಿದ್ದು, ದಿನವಿಡೀ ಹಿತಕರವಾದ ವಾತಾವರಣವಿರಲಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನವು 30°C ನಿಂದ 34°C ನಡುವೆ ಇರಲಿದ್ದು ಮಳೆಯ ಯಾವುದೇ ಮುನ್ಸೂಚನೆ ಇಲ್ಲ. ಬೆಳಿಗ್ಗೆ ಮತ್ತು ರಾತ್ರಿ ವೇಳೆ ಚಳಿಯಿದ್ದರೂ, ಮಧ್ಯಾಹ್ನದ ಹೊತ್ತಿಗೆ ಸೂರ್ಯನ ತಾಪ ಹೆಚ್ಚಿರಲಿದೆ. ಸದ್ಯಕ್ಕೆ ಮಳೆರಾಯನ ದರ್ಶನವಿಲ್ಲದೆ, ರಾಜ್ಯಾದ್ಯಂತ ಶುಷ್ಕ ವಾತಾವರಣವೇ ಮುಂದುವರಿಯಲಿದೆ.
ಬೇಸಿಗೆ ಆರಂಭ? ಇದೀಗ ಬಿಸಿಲು ಹೆಚ್ಚಾದಂತೆ ಬೇಸಿಗೆ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ಈ ಬಾರಿ ನಿರೀಕ್ಷೆಗೂ ಮೊದಲೇ ಬೇಸಿಗೆ ಆರಂಭವಾಗುವ ನಿರೀಕ್ಷೆಯಿದೆ. ಅಂದರೆ ಫೆಬ್ರವರಿ ಮೊದಲ ವಾರದಿಂದಲೇ ಬೇಸಿಗೆ ಆರಂಭವಾಗಬಹುದು. ದಕ್ಷಿಣ ಹಾಗೂ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಈ ಬಾರಿ ಬೇಸಿಗೆ ಭಾರೀ ಏರಿಕೆಯ ಮಟ್ಟ ತಲುಪಬಹುದು ಎಂದು ಹೇಳಲಾಗಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಬೇಸಿಗೆ ಹೆಚ್ಚಾಗಿಯೇ ಇರುತ್ತದೆ. ಅದೇ ರೀತಿ ಈ ಬಾರಿ ಕೂಡಾ ತೇವಾಂಶ ಕೂಡಿದ ಸೆಖೆ ವಾತಾವರಣ ಕರಾವಳಿ ಜಿಲ್ಲೆಗಳಲ್ಲಿ ಇರುತ್ತದೆ. ಇನ್ನು ಚಳಿ ಮಾದರಿಯಲ್ಲೇ ಬೇಸಿಗೆ ಕೂಡಾ ಜನರ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಅದರಲ್ಲೂ ಕರ್ನಾಟಕದ ಉತ್ತರ ಒಳನಾಡು, ಮಲೆನಾಡು ಭಾಗಗಳಲ್ಲಿ ಮುಂದಿನ ಒಂದು ವಾರ ಒಣ ಹವೆ ಇರಲಿದೆ ಎಂದು ಹೇಳಲಾಗಿದೆ.






