ರಾಜಕೀಯ

ಇಂದಿನಿಂದ ಹೊಸ ಸಂಸತ್‌ ಭವನದಲ್ಲಿ 5 ದಿನ ವಿಶೇಷ ಅಧಿವೇಶನ:ಇತಿಹಾಸ ಪುಟಕ್ಕೆ ಸೇರಲಿದೆ ಹಳೇ ಸಂಸತ್ ಭವನ 

Views: 15

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನದ ಕಲಾಪಗಳು ಮಂಗಳವಾರದಿಂದ ಹೊಸ ಸಂಸತ್‌ ಕಟ್ಟಡದಲ್ಲಿ ಆರಂಭವಾಗುತ್ತಿದ್ದು, ಇದರ ನಡುವಲ್ಲೇ ಬ್ರಿಟೀಷರ ಆಳ್ವಿಕೆ, 2ನೇ ಮಹಾಯುದ್ಧ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಗಳಿಗೆ, ಸಂವಿಧಾನ ರಚನೆ ಹೀಗೆ ಹಲವಾರು ಐತಿಹಾಸಿಕ ಹಾಗೂ ವಿವಾದಾತ್ಮಕ ಮಸೂದೆಗಳಿಗೆ ಸಾಕ್ಷಿಯಾಗಿದ್ದ ನವದೆಹಲಿಯ ಹಳೆಯ ಸಂಸತ್ ಭವನ ಇತಿಹಾಸದ ಪುಟ ಸೇರಲು ಕ್ಷಣಗಣನೆ ಆರಂಭವಾಗಿದೆ.

ಮೇ.28ರಂದು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿದ್ದ ಹೊಸ ಸಂಸತ್ ಭವನಕ್ಕೆ ಇಂದು ಚಾಲನೆ ನೀಡಲಾಗುತ್ತಿದೆ. ಹೊಸ ಸಂಸತ್ತಿನಲ್ಲಿ 5 ದಿನಗಳ ಕಾಲ ವಿಶೇಷ ಅಧಿವೇಶನ ನಡೆಯಲಿದೆ.

ನಿನ್ನೆಯಿಂದ ಸಂಸತ್ತಿನ ವಿಶೇಷ ಆರಂಭವಾಗಿದ್ದು, ಭಾರತದ 75 ವರ್ಷಗಳ ಪ್ರಜಾಪ್ರಭುತ್ವದ ಪಯಣದ ಬಗ್ಗೆ ನಿನ್ನೆ ಹಳೇ ಸಂಸತ್ ಕಟ್ಟಡದಲ್ಲಿ ಚರ್ಚೆಗಳು ನಡೆದವು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವರು ಮಾತನಾಡಿದರು

ಇಂದು ಮಧ್ಯಾಹ್ನ 1.15ಕ್ಕೆ ನೂತನ ಸಂಸತ್ ಭವನದಲ್ಲಿ ಲೋಕಸಭೆಯ ಕಲಾಪ ಆರಂಭವಾಗಲಿದ್ದು, ರಾಜ್ಯಸಭೆ ಕಲಾಪ ಮಧ್ಯಾಹ್ನ 2.15ಕ್ಕೆ ಶುರುವಾಗಲಿದೆ. ಇಂದು ನಡೆಯುವ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ, ಒನ್ ನೇಷನ್ ಒನ್ ಎಲೆಕ್ಷನ್, ಇಂಡಿಯಾ ಹೆಸರು ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆಗಳು ನಡೆಯಲಿವೆ ಹಾಗೂ ವಿಶೇಷ ಅಧಿವೇಶದ ಜೊತೆಗೆ ಬಿಲ್‌ಗಳ ಮಂಡನೆಯ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.

Related Articles

Back to top button
error: Content is protected !!