ಶಿಕ್ಷಣ
ಅ.29 ರಂದು ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಪಿಯುಸಿ ವಿದ್ಯಾರ್ಥಿಗಳ ಮ್ಯಾನೇಜ್ಮೆಂಟ್ ಪೆಸ್ಟ್ -ಆರುಣ್ಯ- 2025
Views: 64
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ,ಐ ಕ್ಯೂ ಎ ಸಿ ,ಗಣಕ ವಿಜ್ಞಾನ, ದೈಹಿಕ ಶಿಕ್ಷಣ ಹಾಗೂ ಮಾನವಿಕ ವಿಭಾಗಗಳ ಆಶ್ರಯದಲ್ಲಿ ಉಡುಪಿ ಜಿಲ್ಲಾಮಟ್ಟದ ಪಿಯುಸಿ ವಿದ್ಯಾರ್ಥಿಗಳ ಮ್ಯಾನೇಜ್ಮೆಂಟ್ ಪೆಸ್ಟ್ -ಆರುಣ್ಯ- 2025 ಎನ್ನುವ ಅಂತರ್ ಕಾಲೇಜು ಸ್ಪರ್ಧೆ ದಿನಾಂಕ 29 -10 -2025 ರಂದು ಕಾಲೇಜಿನ ಬಿ ವೀರರಾಜೇಂದ್ರ ಹೆಗ್ಡೆ ಸಭಾಂಗಣದಲ್ಲಿ ನಡೆಯಲಿದೆ.
ಈ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಲಿದ್ದು 12 ವಿವಿಧ ವಿಭಾಗಗಳಲ್ಲಿ ಸ್ಪರ್ಧೆಯನ್ನು ನೀಡಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರ ಪ್ರಕಟಣೆ ತಿಳಿಸಿದೆ.






