ಶಿಕ್ಷಣ
ಅಸೋಡು ಶಾಲೆಗೆ ಕುಡಿಯುವ ನೀರಿನ ಟ್ಯಾಂಕ್ ಕೊಡುಗೆ

Views: 2
ಕುಂದಾಪುರ ತಾಲೂಕಿನ ಅಸೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಾಜಾರಾಮ್ ಪಾಲಿಮರ್ಸ್ ಕೋಟೇಶ್ವರ ಇವರು ಕೊಡಮಾಡಿದ 1000ಲೀ ಸಾಮರ್ಥ್ಯದ ನೀರಿನ ಟ್ಯಾಂಕ್ ನ್ನು ಶಾಲೆಗೆ ಹಸ್ತಾಂತರಿಸಲಾಯಿತು.
ಸಂಸ್ಥೆಯ ಮಾಲೀಕರಾದ ಶ್ರೀ ಸುರೇಶ್ ಕಾಮತ್ ಅವರು ಉಚಿತ ಕೊಡುಗೆಯಾಗಿ ನೀಡಿದ ನೀರಿನ ಟ್ಯಾಂಕ್ ನ್ನು ಶಾಲೆಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಶಂಕರ್ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀಮತಿ ಅರುಣಾ ರಾಧಾಕೃಷ್ಣ, ರಾಘವೇಂದ್ರ ಶೇರಿಗಾರ್, ರಾಧಾಕೃಷ್ಣ ಸೇರಿಗಾರ್, ಮುಂತಾದವರು ಉಪಸ್ಥಿತರಿದ್ದು,ಕೊಡುಗೆ ಸ್ವೀಕರಿಸಿದರು.
ಶಾಲಾ ಅಧ್ಯಾಪಕ ವೃಂದ, ಹಳೆ ವಿದ್ಯಾರ್ಥಿ ಸಂಘ,ಟ್ರಸ್ಟ್, ಪೋಷಕ ಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಕೊಡುಗೆ ನೀಡಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.