ಧಾರ್ಮಿಕ

ಅಸೋಡು ಬೆಂಕಿಕಾನ್ ನಂದಿಕೇಶ್ವರ ಜಾತ್ರಾ ಸಂಪನ್ನ 

Views: 28

ಕುಂದಾಪುರ ತಾಲೂಕಿನ ಹೂವಿನಕೆರೆ ವಾದಿರಾಜ ಮಠದ ತಪ್ಪಲಿನಲ್ಲಿರುವ ಅಸೋಡು ಗ್ರಾಮದ ಬೆಂಕಿಕಾನ್ ನಂದಿಕೇಶ್ವರ ದೈವಸ್ಥಾನದಲ್ಲಿ ಗೆಂಡ, ಶೆಡಿ ಸೇವೆ, ಜಾತ್ರಾ ಮಹೋತ್ಸವ ಸಂಪನ್ನಗೊಂಡಿದೆ.

play-sharp-fill

ಸ್ವಾತಂತ್ರ್ಯ ಪೂವ೯ದಲ್ಲಿ ಬ್ರಿಟಿಷ್ ಕಲೆಕ್ಟರ್ ಅಸೋಡಿನ ಬೆಂಕಿಕಾನ್ ನಂದಿಕೇಶ್ವರ ಮತ್ತು ಪಾತ್ರಿಗಳ ಕಾರಣೀಕ ಶಕ್ತಿಯನ್ನು ಕೇಳಿ ತಿಳಿದು, ಶ್ರೀ ಕ್ಷೇತ್ರಕ್ಕೆ ಬಂದು ವ್ಯಂಗ್ಯಮಾಡಿ, ಪಾತ್ರಿಯ ಕುರಿತು ಅವಮಾನಿಸಿದನು.

ನಿಮ್ಮಲ್ಲಿ ಇಂತಹ ಶಕ್ತಿ ಇದ್ದಿದ್ದೆ ಹೌದು ಎಂತಾದರೆ ಕುದಿಯುವ ಎಣ್ಣೆಯ ಕೊಪ್ಪರಿಗೆಗೆ ಹಾರಬೇಕು ಎಂದು ಇಲ್ಲಿನ ಪಾತ್ರಿಗಳಿಗೆ ಸವಾಲು ಹಾಕಿದರು.

ಅದೇ ದಿನ ರಾತ್ರಿ ಪಾತ್ರಿಗಳ ಕನಸಿನಲ್ಲಿ ದೈವ ದಶ೯ನದಲ್ಲಿ ನಿಜವಾದ ಸತ್ಯ ದಶ೯ನ ಆಗಬೇಕು ಎಂದು ಅಶರೀರವಾಣಿಯು ನುಡಿಯಿತು.

ಬ್ರಿಟಿಷ್ ಅಧಿಕಾರಿಗಳು ಮತ್ತು ತಂಡದ ಸಮ್ಮುಖದಲ್ಲಿ ಪಾತ್ರಿಗಳು ಕೈಯಲ್ಲಿ ಹಿಡಿದ ವೀಳ್ಯದ ಎಲೆಯನ್ನು ಕುದಿಯುತ್ತಿರುವ ಎಣ್ಣೆಯ ಕೊಪ್ಪರಿಗೆಗೆ ಹಾಕುತ್ತೇನೆ ಅದು ಬಾಡದಿದ್ದರೆ ಕೊಪ್ಪರಿಗೆಗೆ ಹಾರುತ್ತೇನೆ ಬಾಡಿದರೆ ಇಲ್ಲ ಎಂದು ಬ್ರಿಟಿಷ್ ಅಧಿಕಾರಿಗಳಿಗೆ ಪ್ರತಿ ಸವಾಲನ್ನು ಹಾಕಿದರು.

ವೀಳ್ಯದ ಎಲೆ ಪಟ್ಟಿಯನ್ನು ಕುದಿಯುವ ಎಣ್ಣೆ ಕೊಪ್ಪರಿಗೆಗೆ ಹಾಕಲಾಯಿತು. ವೀಳ್ಯದ ಎಲೆ ಬಾಡಲಿಲ್ಲ ಕೂಡಲೆ ಪಾತ್ರಿಗಳು ಕೊಪ್ಪರಿಗೆಗೆ ಹಾರಿದರು.

ತನ್ನ ಶಿಖೆ ಯನ್ನು ಒಮ್ಮಲೇ ಬಿಡಿಸಿ ಎದ್ದು ಬಂದಾಗ ಕೊಪ್ಪರಿಗೆಯ ಸುತ್ತಲೂ ಇರುವ ಬ್ರಿಟಿಷ್ ಅಧಿಕಾರಿ ಮತ್ತು ತಂಡದವರ ಮೈ ಮೇಲೆ ಬಿಸಿ ಎಣ್ಣೆ ಸಿಂಪಡಿಸಿದ್ದರಿಂದ ದಿಕ್ಕಾಪಾಲಾಗಿ ಓಡಿ ಮೈ ಹುಣ್ಣಾಗಿಸಿಕೊಂಡರು.

ತಾವು ನೀಡಿದ ಸವಾಲಿಗೆ ಸತ್ಯದಶ೯ನ ಕಂಡು ತಮ್ಮ ತಪ್ಪಿನ ಅರಿವಾಗಿ ಪಾತ್ರಿಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ನೀಡಿದ್ದಾರೆ ಎಂಬ ಪ್ರತೀತಿಯನ್ನು ಜನರಾಡಿ ಕೊಳ್ಳುತ್ತಿದ್ದಾರೆ.

Related Articles

Back to top button
error: Content is protected !!