ಶಿಕ್ಷಣ

ಅವಳಿ ಸಹೋದರಿಯರಿಗೆ ಪಿಯುಸಿಯಲ್ಲಿ ಒಂದೇ ಸಮಾನವಾದ ಅಂಕ..!

ಚುಕ್ಕಿ ಚಂದ್ರ, ಇಬ್ಬನಿ ಚಂದ್ರ ಇಬ್ಬರೂ 10ನೇ ತರಗತಿಯಲ್ಲೂ ಕೂಡ ಸಮಾನ ಅಂಕ ಗಳಿಸಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಇಬ್ಬರಿಗೂ 620 ಅಂಕ ಅಂದ್ರೆ 99.20% ಬಂದಿತ್ತು.

Views: 201

ಕೊಡಗು :ಅವಳಿ ಸಹೋದರಿಯರಿಗೆ ಪಿಯುಸಿಯಲ್ಲಿ ಒಂದೇ ಸಮಾನವಾದ ಅಂಕ ಬಂದಿರೋದು ಅಚ್ಚರಿಗೆ ಕಾರಣವಾಗಿದೆ.

ಹಾಸನದ ರಾಯಲ್ ಅಪೋಲೋ ಕಾಲೇಜು ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿಯಲ್ಲಿ ಒಂದೇ ಮಾರ್ಕ್ಸ್ ತೆಗೆದಿದ್ದಾರೆ. ಅವಳಿ ಪುತ್ರಿಯರಾದ ಚುಕ್ಕಿ ಚಂದ್ರ, ಇಬ್ಬನಿ ಚಂದ್ರ ಇಬ್ಬರೂ ಒಟ್ಟು 571 ಅಂಕ ಪಡೆದಿದ್ದಾರೆ. ಇವರಿಬ್ಬರ ಪರ್ಸೆಂಟೇಜ್ ಕೂಡ 95.17% ಆಗಿದೆ.

ಚುಕ್ಕಿ ಚಂದ್ರ, ಇಬ್ಬನಿ ಚಂದ್ರ ಇಬ್ಬರೂ 10ನೇ ತರಗತಿಯಲ್ಲೂ ಕೂಡ ಸಮಾನ ಅಂಕ ಗಳಿಸಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಇಬ್ಬರಿಗೂ 620 ಅಂಕ ಅಂದ್ರೆ 99.20% ಬಂದಿತ್ತು. ಇದೀಗ ಪಿಯುಸಿಯಲ್ಲೂ ಕೂಡ ಅವಳಿ ಸಹೋದರಿಯರಿಗೆ ಸಮಾನ ಅಂಕ ಬಂದಿರೋದು ಖುಷಿ ತಂದಿದೆ.

ಚುಕ್ಕಿ ಚಂದ್ರ, ಇಬ್ಬನಿ ಚಂದ್ರ ಕೃಷಿ ಇಲಾಖೆ ಅಧಿಕಾರಿ ವಿನೋದ್ ಚಂದ್ರ ಮತ್ತು ಕನ್ನಿಕಾ ದಂಪತಿಯ ಪುತ್ರಿಯರು. ವಿನೋದ್ ಚಂದ್ರ ಅವರು ಈ ಹಿಂದೆ ಕೊಡಗಿನ ವಾರ್ತಾ ಇಲಾಖೆಯ ಅಧಿಕಾರಿ ಆಗಿದ್ದರು.

Related Articles

Back to top button