ರಾಜಕೀಯ

ಅರೆಸ್ಟ್ ಆಗುವ ಮೊದಲು ರೇವಣ್ಣ.. ಡೋರ್ ಹಾಕಿಕೊಂಡು ಆ ಮುಕ್ಕಾಲು ಗಂಟೆ ಮಾಡಿದ್ದೇನು..?

Views: 172

ಜಾಮೀನು ಅರ್ಜಿ ವಿಚಾರಣೆ ಆಲಿಸಿದ ಕೋರ್ಟ್, ಅಂತಿಮವಾಗಿ ಅರ್ಜಿಯನ್ನು ವಜಾಗೊಳಿಸಿದೆ.ಬೇಲ್ ಅರ್ಜಿ ವಜಾ ಆಗ್ತಿದ್ದಂತೆ ದೇವೇಗೌಡರ ಮನೆಯಲ್ಲಿ ರೇವಣ್ಣ ಇರೋದು ಪಕ್ಕಾ ಮಾಡಿಕೊಂಡ ಎಸ್ಐಟಿ ತಂಡ ಅಲ್ಲಿಗೆ ದೌಡಾಯಿಸಿತ್ತು. ದೇವೇಗೌಡರ ನಿವಾಸದ ಮುಂದೆ ಎಸ್ಐಟಿ ತಂಡ ಜಮಾಯಿಸಿ ಬರೋಬ್ಬರಿ ಮುಕ್ಕಾಲು ಗಂಟೆ ಕಾದಿದ್ದಾರೆ. ರೇವಣ್ಣ ದರ್ಶನ ಮಾತ್ರ ಸಿಗಲಿಲ್ಲ. ಕೊನೆಗೆ ಮುಕ್ಕಾಲು ಗಂಟೆ ಕಾಯಿಸಿದ ಬಳಿಕ ತಾವೇ ಡೋರ್ ಓಪನ್ ಮಾಡಿ ಮನೆಯಿಂದ ಹೊರಬಂದ ರೇವಣ್ಣ, ಎಸ್ಐಟಿ ತಂಡದ ಮುಂದೆ ಶರಣಾದರು.

ಮುಕ್ಕಾಲು ಗಂಟೆ ರೇವಣ್ಣ ಮಾಡಿದ್ದೇನು ಗೊತ್ತಾ?

ಅಷ್ಟಕ್ಕೂ ಈ ಮುಕ್ಕಾಲು ಗಂಟೆ ರೇವಣ್ಣ ಮಾಡಿದ್ದೇನು ಅನ್ನೋದೆ ಎಲ್ಲರಿಗೂ ಯಕ್ಷ ಪ್ರಶ್ನೆಯಾಗಿತ್ತು. ಹೇಳಿ ಕೇಳಿ ಎಲ್ಲದಕ್ಕೂ ಘಳಿಗೆ-ಮುಹೂರ್ತ ನೋಡೋ ರೇವಣ್ಣ, ಶರಣಾಗಲು ಸಹ ಮಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಜ್ಯೋತಿಷ್ಯ ಪ್ರಕಾರ 5 ಗಂಟೆ 17 ನಿಮಿಷದಿಂದ 6 ಗಂಟೆ 50 ನಿಮಿಷದವರೆಗೆ ಇದ್ದಿದ್ದು ಕಾಲ ಲಗ್ನ.. ಹೀಗಾಗಿ ಸಂಜೆ 6.50ರ ಬಳಿಕ ಲಾಭ ಲಗ್ನ… ಇರುವುದರಿಂದ ಅದೇ ಹೊತ್ತಿಗೆ ರೇವಣ್ಣ ಶರಣಾಗಿದ್ದಾರೆ.ಎಂದು ತಿಳಿದು ಬಂದಿದೆ.

ಬಂಧನದ ಬಳಿಕ ಸಿಐಡಿ ಕಚೇರಿಯಿಂದ ಬೌರಿಂಗ್ ಆಸ್ಪತ್ರೆಗೆ ರೇವಣ್ಣರನ್ನು ಕರೆದೊಯ್ದ ಎಸ್ಐಟಿ ಪೊಲೀಸರು ಮೆಡಿಕಲ್ ಚೆಕಪ್ ಮಾಡಿಸಿದ್ದಾರೆ. ಬರೋಬ್ಬರಿ 2 ಗಂಟೆ ರೇವಣ್ಣ ಆರೋಗ್ಯ ತಪಾಸಣೆ ನಡೆಸಿದ ಆರೋಗ್ಯ ಸಿಬ್ಬಂದಿ, ಬಿ.ಪಿ, ಶುಗರ್, ಯೂರಿನ್, ಬ್ಲಡ್ ಚೆಕಪ್ ಮಾಡಿದ್ದಾರೆ. ಈ ವೇಳೆ ರೇವಣ್ಣಗೆ ಅಧಿಕ ರಕ್ತದೊತ್ತಡ ಕಾಣಿಸಿಕೊಂಡ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಇಸಿಜಿ ಸಹ ಮಾಡಿಸಲಾಗಿದೆ.

ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮುಗಿಸಿದ ಬಳಿಕ ಹೆಚ್.ಡಿ ರೇವಣ್ಣರನ್ನು ಸಿಐಡಿ ಕಚೇರಿಗೆ ವಾಪಸ್ ಕರೆತರಲಾಯ್ತು.. ರೇವಣ್ಣಗಾಗಿ ಹೊಸ ಹಾಸಿಗೆ ಹಾಗೂ ಬೆಡ್ ಶೀಟ್ ವ್ಯವಸ್ಥೆ ಮಾಡಲಾಗಿತ್ತು. ಈವರೆಗೆ ಸುಖದ ಸುಪ್ಪತ್ತಿನಲ್ಲಿದ್ದ ರೇವಣ್ಣ, ಬಂಧನಕ್ಕೆ ಒಳಗಾಗಿ ಸಿಐಡಿ ಕಚೇರಿಯಲ್ಲೇ ರಾತ್ರಿ ಕಳೆಯುವಂತಾಯ್ತು.

 

Related Articles

Back to top button
error: Content is protected !!