ಅಗಸ್ಟ್ ತಿಂಗಳಲ್ಲಿ 100 ವರ್ಷಗಳಲ್ಲೇ ಕಡಿಮೆ ಮಳೆ!

Views: 0
ಅಗಸ್ಟ್ ತಿಂಗಳು ಮುಗಿಯಲು ಇನ್ನೆರಡು ದಿನ ಮಾತ್ರ ಬಾಕಿ ಇದೆ. ನೂರು ವರ್ಷಗಳಲ್ಲೇ ಕನಿಷ್ಠ ಮಳೆಯನ್ನು ಕಾಣುವ ದಾಪುಗಾಲಿಟ್ಟಿದೆ.
ದೇಶದಲ್ಲಿ ಪ್ರಸ್ತುತ ಮಳೆಯ ಕೊರತೆಯನ್ನು ಗಮನಿಸಿದರೆ 8 ವರ್ಷಗಳಲ್ಲಿ ಕನಿಷ್ಠ ಮುಂಗಾರು ಮಳೆಯನ್ನು ಕಂಡ ವರ್ಷ ಎಂಬ ದಾಖಲೆ ನಿರ್ಮಾಣವಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮುಂಗಾರು ಮಳೆ ವಾಡಿಕೆಯಂತೆ ದೇಶದಲ್ಲಿ ಶೇಕಡ 70ರಷ್ಟು ಬೆಳೆಗಳು, ಜಲಾಶಯಗಳು, ಅಂತರ್ಜಲಕ್ಕೆ ನೀರನ್ನು ಒದಗಿಸುತ್ತದೆ. ಇದು ಕಡಿಮೆಯಾದರೆ ಸಹಜವಾಗಿಯೇ ಬೆಳೆಗಳು ಕಡಿಮೆಯಾಗುತ್ತದೆ.ಇದರಿಂದ ಆಹಾರದಾನ್ಯಗಳ ಬೆಲೆ ಗಗನಕ್ಕೇರುತ್ತದೆ.
ಸದ್ಯ ದೇಶದಲ್ಲಿ ಅರ್ಧದಷ್ಟು ಕೃಷಿ ಭೂಮಿಗೆ ನೀರಾವರಿಯ ಕೊರತೆ ಇದೆ. ಹೀಗೆ ಮುಂದುವರೆದರೆ ಅಕ್ಕಿ, ಗೋಧಿ, ಸಕ್ಕರೆ ಮತ್ತು ಆಹಾರ ಪದಾರ್ಥಗಳ ರಫ್ತಿನ ಮೇಲೆ ನಿಷೇಧ ಹೇರಬೇಕಾಗುತ್ತದೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮುನ್ನೆಚ್ಚರಿಕೆಯ ಕ್ರಮದ ಸೂಚನೆ
ಉಭಯ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ವಾಡಿಕೆಯಷ್ಟು ಬಾರದ ಕಾರಣ ವರ್ಷಾಂತ್ಯದಲ್ಲೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ.
ಉಭಯ ಜಿಲ್ಲಾಡಳಿತ ಕೂಡಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಿದ್ದು, ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಅವರು ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಅವರ ಸಹಿತವಾಗಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸೂಚನೆ ನೀಡಿದ್ದಾರೆ.
ಈ ನಡುವೆ ಕೊಳವೆ ಬಾವಿ ಮರುಪೂರಣಕ್ಕೂ ನಿರ್ದೇಶನ ನೀಡಲಾಗಿದೆ. ಡ್ಯಾಮ್ ಗಳಲ್ಲಿ ನೀರಿನ ಮಟ್ಟದ ಆಧಾರದಲ್ಲಿ ಎಷ್ಟೆಷ್ಟು ನೀರು ಬಿಡುಗಡೆ ಮಾಡಬೇಕು ಮತ್ತು ನೀರಿನ ಸಂಗ್ರಹಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಿದೆ.







