ಸಾಂಸ್ಕೃತಿಕ

ಹೊಸ ಲುಕ್ ನಲ್ಲಿ ಮತ್ತೆ ಕಣ್ಮನ ಸೆಳೆದ ಕುಂಭಮೇಳದ ಗಾಜುಕಣ್ಣಿನ ಸುಂದರಿ ಮೊನಾಲಿಸಾ

Views: 109

ಕನ್ನಡ ಕರಾವಳಿ ಸುದ್ದಿ: ಮಹಾ ಕುಂಭಮೇಳದಲ್ಲಿ ಸಂಚಲನ ಸೃಷ್ಟಿಸಿದ್ದ ಗಾಜುಕಣ್ಣಿನ ಸುಂದರಿ ಮೊನಾಲಿಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ದಿನದಿಂದ ದಿನಕ್ಕೆ ಮೊನಾಲಿಸಾ ಹೊಸ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಯೂಟ್ಯೂಬರ್‌ ಒಬ್ಬರ ಕಣ್ಣಿಗೆ ಬಿದಿದ್ದರು ಈ ಮೊನಾಲಿಸಾ. ತಮ್ಮ ಬ್ಯೂಟಿಫುಲ್ ಕಣ್ಣುಗಳಿಂದಲೇ ಸೆನ್ಸೇಷನ್ ಸೃಷ್ಟಿಸಿರುವ ಮೊನಾಲಿಸಾ ಸಖತ್ ಬ್ಯುಸಿಯಾಗಿದ್ದಾರೆ.

ಅದರಲ್ಲೂ ಮೇಕಪ್, ಫೋಟೋಶೂಟ್, ಡ್ಯಾನ್ಸ್, ಸಿನಿಮಾ ಅಂತ ಮೊನಾಲಿಸಾ ಕಾಲ ಕಳೆಯುತ್ತಿದ್ದಾರೆ. ಮೇಕಪ್ ಆರ್ಟಿಸ್ಟ್ಗಳು ಮೊನಾಲಿಸಾರನ್ನೇ ಬಿಡುತ್ತಿಲ್ಲ. ಹೊಸ ಹೊಸ ರೀತಿಯಲ್ಲಿ ಮೊನಾಲಿಸಾಗೆ ಮೈಕಪ್ ಮಾಡಿ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಈ ಹಿಂದೆ ಮೊನಾಲಿಸಾ ವಧುವಿನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು.

ಅಲ್ಲದೇ ಅಮೇರಾ ಲ್ಯಾಬ್ ಡೈಮಂಡ್ ಆಭರಣ ಶಾಪ್ನವರು ಮೊನಾಲಿಸಾ ಮೈಮೇಲೆ ತಮ್ಮ ಜ್ಯುವೆಲ್ಲರ್ಸ್ ಹಾಕಿಸಿ ಫೋಟೋಶೂಟ್ ಮಾಡಿದ್ದರು. ಬ್ಲಾಕ್ ಸೂಟ್ನಲ್ಲಿ ಡೈಮಂಡ್ ನೆಕ್ಲೇಸ್ ಧರಿಸಿಕೊಂಡು ಫೋಟೋಗೆ ಥೇಟ್ ಬಾಲಿವುಡ್ ಮಾಡೆಲ್ಗಳ ಹಾಗೇ ಪೋಸ್ ಕೊಟ್ಟು ಸಖತ್ ಸುದ್ದಿಯಲ್ಲಿದ್ದರು ಮೊನಾಲಿಸಾ. ಆದ್ರೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ.

ಇದೇ ವಿಡಿಯೋ ನೋಡಿದ ನೆಟ್ಟಿಗರು ಮೊನಾಲಿಸಾಳನ್ನು ಹೊಸ ಲುಕ್ಗೆ ಶಾಕ್ ಆಗಿದ್ದಾರೆ. ವಿಭಿನ್ನ ಉಡುಪುಗಳಲ್ಲಿ ರ‍್ಯಾಂಪ್ ವಾಕ್ ಮಾಡಿತ್ತಾ ನೋಡುಗರ ಕಣ್ಮನ ಸೆಳೆಯುತ್ತಿದ್ದಾರೆ. ಆದ್ರೆ ಇದು ನಿಜ ಅಲ್ಲ ಬದಲಾಗಿ ದುಬೈನ AI ಕಲಾವಿದ ಜ್ಯೋ ಜಾನ್ ಮುಲ್ಲೂರ್ ತಮ್ಮ ಕಲ್ಪನೆಯನ್ನು ಬಳಸಿಕೊಂಡು ಮೊನಾಲಿಸಾ ಅವರ ಈ ವೀಡಿಯೊವನ್ನು ರಚಿಸಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಮೊನಾಲಿಸಾ ಕಪ್ಪು ಟಾಪ್ ಮತ್ತು ಬೂದು ಬಣ್ಣದ ಶಾರ್ಟ್ಸ್‌ನಲ್ಲಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಎರಡನೇ ಲುಕ್ನಲ್ಲಿ ಮೊನಾಲಿಸಾ ಕಿತ್ತಳೆ ಬಣ್ಣದ ಉಡುಪಿನಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆಯುತ್ತಿರುವುದು ಕಂಡುಬರುತ್ತದೆ.

Related Articles

Back to top button