ಜನಮನ

ಹೊಸ ಲುಕ್ ನಲ್ಲಿ ಕುಂಭಮೇಳದ ಸುಂದರಿ ಮೊನಾಲಿಸಾ..ಫಿದಾ ಆದ್ರೂ ನೆಟ್ಟಿಗರು!

Views: 119

ಕನ್ನಡ ಕರಾವಳಿ ಸುದ್ದಿ: ಮಹಾಕುಂಭ ಮೇಳದಲ್ಲಿ ಸಂಚಲನ ಸೃಷ್ಟಿಸಿದ್ದ ಗಾಜುಗಣ್ಣಿನ ಹುಡುಗಿ ಮೊನಾಲಿಸಾ ಅವರ ಅದೃಷ್ಟವೇ ಬದಲಾಗಿ ಹೋಗಿದೆ. ದಿನದಿಂದಿನಕ್ಕೆ ಮೊನಾಲಿಸಾ ಹೊಸ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಯೂಟ್ಯೂಬರ್‌ ಒಬ್ಬರ ಕಣ್ಣಿಗೆ ಬಿದ್ದಿದ್ದರು ಈ ಮೊನಾಲಿಸಾ. ತಮ್ಮ ಬ್ಯೂಟಿಫುಲ್ ಕಣ್ಣುಗಳಿಂದಲೇ ಸೆನ್ಸೇಷನ್ ಸೃಷ್ಟಿಸಿರುವ ಮೊನಾಲಿಸಾ ಸಖತ್ ಬ್ಯುಸಿಯಾಗಿದ್ದಾರೆ.

ಅದರಲ್ಲೂ ಮೇಕಪ್ ಆರ್ಟಿಸ್ಟ್ ಮೊನಾಲಿಸಾ ಬಿಡುತ್ತಿಲ್ಲ.ಹೊಸ ಹೊಸ ರೀತಿಯಲ್ಲಿ ಮೊನಾಲಿಸಾಗೆ ಮೈಕಪ್ ಮಾಡಿ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಮೊನಾಲಿಸಾ ಅವರ ವೀಡಿಯೊವನ್ನು ಮೇಕ್ ಓವರ್ ಕಾವ್ಯ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದೆ.

ಆ ವಿಡಿಯೋದಲ್ಲಿ ಮೇಕಪ್ ಕಲಾವಿದೆ ಬಬ್ಲಿ ಅಹಿರ್ವಾರ್ ಮೊನಾಲಿಸಾಳನ್ನು ವಧುವಿನಂತೆ ಅಲಂಕರಿಸಿದ್ದಾರೆ. ಆದರೆ ಕೆಂಪು ಉಡುಪನ್ನು ಧರಿಸಿದ ಮೊನಾಲಿಸಾ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾಳೆ. ಸದ್ಯ ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಫಿದಾ ಆಗಿದ್ದಾರೆ ನೆಟ್ಟಿಗರು.

Related Articles

Back to top button
error: Content is protected !!