ಹಾವು ಬಚಾವ್ ಮಾಡಲು ಹೋಗಿ ಕಾರು ಪಲ್ಟಿ:ಮಹಿಳೆ ಸಾವು, ಇಬ್ಬರಿಗೆ ಗಾಯ

Views: 161
ಕನ್ನಡ ಕರಾವಳಿ ಸುದ್ದಿ: ರಸ್ತೆಗೆ ಅಡ್ಡಲಾಗಿ ಬಂದ ಹಾವನ್ನು ಬಚಾವ್ ಮಾಡಲು ಹೋಗಿ ಕಾರು ಪಲ್ಟಿಯಾಗಿ ಪತ್ನಿ ಮೃತಪಟ್ಟು, ಪತಿ, ಸೋದರ ಸಂಬಂಧಿ ಗಾಯಗೊಂಡ ಘಟನೆ ಚಾಮರಾಜನಗರ ಹನೂರು ತಾಲೂಕಿನ ಎಂ.ಜಿ.ದೊಡ್ಡಿ ಬಳಿ ಮಂಗಳವಾರ ನಡೆದಿದೆ.
ನಂಜನಗೂಡು ತಾಲೂಕಿನ ಕವಲಂದೇ ಗ್ರಾಮದ ಮಂಜುಳಾ ಮೃತಪಟ್ಟ ದುರ್ದೈವಿ. ಪತಿ ಪ್ರಕಾಶ್, ಸಹೋದರ ಸಂಬಂಧಿ ಸಚಿನ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಕರ ಸಂಕ್ರಾಂತಿ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟಕ್ಕೆ ಪೂಜೆಗೆ ತೆರಳುತ್ತಿದ್ದಾಗ ಹನೂರು ತಾಲೂಕಿನ ಎಂ.ಜಿ. ದೊಡ್ಡಿ ಬಳಿ ರಸ್ತೆಗೆ ಅಡ್ಡಲಾಗಿ ಭಾರಿ ಗಾತ್ರದ ಹಾವು ಬಂದಿದ್ದು, ಅದನ್ನು ತಪ್ಪಿಸಲು ಹೋಗಿ ಕಾರು ಕಲ್ಲು ಬಂಡೆಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಮಂಜುಳಾ ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪ್ರಕಾಶ್ ಮತ್ತು ಸಚಿನ್ ಚಿಕಿತ್ಸೆ ಪಡೆಯುತ್ತಿದ್ದು, ರಾಮಾಪುರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.