ಸಾಂಸ್ಕೃತಿಕ

ಸೌಂದರ್ಯವೇ ಶಾಪವಾಗಿ, ಚಿಂತೆಯಲ್ಲಿಯೇ ಹಾಸಿಗೆ ಹಿಡಿದ ಮೊನಾಲಿಸಾ!

Views: 340

ಕನ್ನಡ ಕರಾವಳಿ ಸುದ್ದಿ: ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸ್ಟಾರ್ ಆದ ಮೊನಾಲಿಸಾಗೆ ಈ ಸೌಂದರ್ಯವೇ ಶಾಪವಾಗಿದೆ. ಇದೇ ಚಿಂತೆಯಲ್ಲಿ ಮೊನಾಲಿಸಾ ಈಗ ಹಾಸಿಗೆ ಹಿಡಿದಿದ್ದಾಳೆ. ಈ ಚಿಂತೆ ಮೊನಾಲಿಸಾಳ ಆರೋಗ್ಯವನ್ನು ದಿನೇ ದಿನೇ ಹದಗೆಡಿಸುತ್ತಿದೆ.

ತುಂಬಾ ಸಾಲ ಮಾಡಿಕೊಂಡಿದ್ದ ತಂದೆಗೆ ಸಹಾಯ ಮಾಡಲು ಮೊನಾಲಿಸಾ ಮಹಾ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಿ ದಿನಕ್ಕೆ 500 ರಿಂದ 1000 ರೂಪಾಯಿ ಸಂಪಾದನೆ ಮಾಡಿಕೊಂಡು ಜೀವನ ನಡೆಸುತ್ತಿದ್ದಳು. ಆದರೆ ಯಾರೋ ಒಬ್ಬರು ಆಕೆಯ ವೀಡಿಯೋ ಹಾಗೂ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗಿನಿಂದ ಆಕೆ ಸೆಲೆಬ್ರಿಟಿಗಿಂತ ಹೆಚ್ಚು ಫೇಮಸ್ ಆಗಿಬಿಟ್ಟಿದ್ದಾಳೆ. ಆಕೆಯ ಸೌಂದರ್ಯವೇ ಈಗ ಆಕೆಗೆ ಮುಳುವಾಗಿ ಹೋಗಿದೆ

ಮೊದಮೊದಲು ಸಂದರ್ಶನಗಳಲ್ಲಿ ಖುಷಿ ಖುಷಿಯಿಂದ ಮಾತನಾಡುತ್ತಿದ್ದ ಮೊನಾಲಿಸಾಳನ್ನು ಫೋಟೋಗಾಗಿ ಜನ ಎಳೆದಾಡಿ ನೂಕಾಡಿ ಆಕೆಯ ಜೀವನಕ್ಕೆ ಧಕ್ಕೆ ತಂದಿದ್ದಾರೆ.

ಮೊನಾಲಿಸಾ ಪರಿಸ್ಥಿತಿ ಹೇಗಾಗಿದೆ ಎಂದರೆ ಬದುಕುವುದೇ ಕಷ್ಟವಾಗಿ ಹೋಗಿದೆ. ಈ ಬಡ ಹುಡುಗಿಯೊಂದಿಗೆ ಪುಂಡರು ಫೋಟೋ ಕ್ಲಿಕ್ಕಿಸಿಕೊಳ್ಳಲು ಬಂದು ಅಸಭ್ಯವಾಗಿ ವರ್ತಿಸಿದ್ದಾರೆ. ಅದನ್ನು ತಡೆಯಲು ಬಂದ ಮೊನಾಲಿಸಾ ಅಣ್ಣನನ್ನು ಪುಂಡರು ಥಳಿಸಿದ್ದಾರೆ. ಅಲ್ಲದೇ ಮೊನಾಲಿಸಾಳನ್ನು ಎಲೆದಾಡಿ ಬಡಿದಾಡಿ ಆಕೆಯ ಕೈಗೂ ಕೂಡ ಏಟಾಗಿದೆ. ಇದರಿಂದಾಗಿ ಮೊನಾಲಿಸಾ ಕೈಗಳಿಗೆ ಮೂರು ಸ್ಟಿಚ್‌ಗಳನ್ನೂ ಹಾಕಲಾಗಿದೆ.

ಸೈಲೆಂಟಾಗಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಮೊನಾಲಿಸಾ ಇದೀಗ ಮಹಾ ಕುಂಭ ಮೇಳದಿಂದಲೇ ಮರೆಯಾಗುತ್ತಿದ್ದಾಳೆ. ಯಾಕೆಂದರೆ ಆಕೆಯ ಜೀವಕ್ಕೆ ಅಪಾಯ ಇದೆ ಎಂದು ಆಕೆಗೆ ಭಯ ಶುರುವಾಗಿದೆ. ಮಗಳನ್ನು ಜೋಪಾನ ಮಾಡುವುದು ಅಪ್ಪನಿಗೆ ಕಷ್ಟವಾಗುತ್ತಿದೆ. ಹೇಗೋ ಹೊಟ್ಟೆ ಪಾಡಿಗೆ ಸಣ್ಣ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಕುಟುಂಬಕ್ಕೆ ಮೊನಾಲಿಸಾಳನ್ನು ಕಾಪಾಡುವುದೇ ದೊಡ್ಡ ಕೆಲಸವಾಗಿ ಹೋಗಿದೆ.

ಮೊನಾಲಿಸಾ ಕುಟುಂಬ ಇತ್ತೀಚೆಗೆ ಒಂದು ಪುಟ್ಟ ಮನೆಯನ್ನು ಕಟ್ಟಿದೆ. ಆ ಮನೆ ಕಟ್ಟಲು ಸಾಲ ಮಾಡಿಕೊಂಡಿದೆ. ಆ ಸಾಲವನ್ನು ತೀರಿಸಲು ಮೊನಾಲಿಸಾ ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾಲೆ ಮಾರಿ ಸ್ವಲ್ಪ ಹಣ ಸಂಪಾದನೆ ಮಾಡುತ್ತಿದ್ದಳು. ಆದರೀಗ ಸೆಲ್ಫಿಗಾಗಿ ಬಂದ ಜನ ರುದ್ರಾಕ್ಷಿ ಮಾಲೆ ಖರೀದಿ ಮಾಡದೆ ಫೋಟೋ ಕ್ಲಿಕ್ಕಿಸಿಕೊಂಡು ಎಸ್ಕೇಪ್ ಆಗುತ್ತಿದ್ದಾರೆ. ಆಕೆಯ ಸಮಯ ವ್ಯರ್ಥ ಮಾಡುವುದು ಮಾತ್ರವಲ್ಲದೆ ಆಕೆಯ ಹಿಂದೆ ಬಿದ್ದು ಆಕೆಯ ಕೆಲಸಕ್ಕೂ ತೊಂದರೆ ಕೊಡುತ್ತಿದ್ದಾರೆ.

ಇದರಿಂದಾಗಿ ಮೊನಾಲಿಸಾ ಸಾಲ ತೀರಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಹಾಸಿಗೆ ಹಿಡಿದಿದ್ದಾಳೆ ಎನ್ನಲಾಗುತ್ತಿದೆ. ಫೋಟೋ ತೆಗೆಸಿಕೊಳ್ಳಲು ಜನ ಧಮ್ಕಿ ಹಾಕುತ್ತಿದ್ದು, ಆಕೆಯ ಮನೆಗೆ ಬಂದು ತೊಂದರೆ ಕೊಡುತ್ತಿದ್ದು ಮೊನಾಲಿಸಾ ಸಿಕ್ಕಪಟ್ಟೆ ಭಯಗೊಂಡಿದ್ದಾಳೆ.

Related Articles

Back to top button