ಇತರೆ

ಸಾಲ ವಾಪಸ್‌ ಕೇಳಿದಕ್ಕೆ ಮಹಿಳೆಯ ಬರ್ಬರ ಹತ್ಯೆ; ತಾಯಿ ಮಗಳು ಪೊಲೀಸ್ ವಶಕ್ಕೆ 

Views: 122

ಕನ್ನಡ ಕರಾವಳಿ ಸುದ್ಧಿ : ಕೊಟ್ಟ ಸಾಲವನ್ನು ಸಮಯಕ್ಕೆ ಸರಿಯಾಗಿ ವಾಪಸ್ ನೀಡಲಿಲ್ಲ. ಹಾಗಾಗಿ ಅದನ್ನು ಕೇಳಲು ಹೋದ ಮಹಿಳೆಯನ್ನು ತಾಯಿ ಮಕ್ಕಳು ಸೇರಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಭೀಕರ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿಗಳು ಪೊಲೀಸರ ವಶಕ್ಕೆ ಪಡೆದಿದ್ದಾರೆ.

ಜ್ಯೋತಿ ಬಾಂದೇಕರ್, ಮಗಳು ಸುಹಾನಿ ಬಾಂದೇಕರ್ ಹಾಗೂ ಜ್ಯೋತಿ ಅಪ್ರಾಪ್ತ ಮಗ ಆರೋಪಿಗಳು. ಅಂಜನಾ ದಡ್ಡಿಕರ್ ಮೃತ ಮಹಿಳೆ.

ಅಂಜನಾ ಬೆಳಗಾವಿ ನಗರದ ಗಣೇಶ್ ಪುರದ ಅಪಾರ್ಟ್ ಮೆಂಟ್‌ನಲ್ಲಿ ವಾಸವಿದ್ದಳು. ಜ್ಯೋತಿ ಬಾಂದೇಕರ್ ಅಂಜನಾಳಿಂದ 15 ಸಾವಿರ ಸಾಲ ಪಡೆದುಕೊಂಡಿದ್ದರು. ಅದನ್ನು ವಾಪಸ್ ಕೊಡುವಂತೆ ಕೇಳಿಕೊಂಡ ವೇಳೆ ಈ ದುಷ್ಕೃತ್ಯ ನಡೆದಿದೆ. ತಾಯಿ-ಮಗಳು ಹಾಗೂ ಅಪ್ರಾಪ್ತ ಮಗ ಮೂವರೂ ಸೇರಿ ಅಂಜನಾಳನ್ನು ಕೊಲೆಗೈದಿದ್ದರು. ಅಂಜನಾಳ ಪತಿ ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗಲೇ ಪತ್ನಿ ಕೊಲೆಯಾಗಿರುವುದು ಗೊತ್ತಾಗಿತ್ತು. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಬೆಳಗಾವಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರನ ದಾಖಲಾಗಿದೆ. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿದಿದ್ದಾರೆ.

Related Articles

Back to top button
error: Content is protected !!