ಜನಮನ
ಸಯಾಮಿ ಮಕ್ಕಳನ್ನು ಯಶಸ್ವಿಯಾಗಿ ಬೇರ್ಪಡಿಸಿದ ವೈದ್ಯರು

Views: 0
ಉತ್ತರ ಪ್ರದೇಶದ ಬರೇಲಿಯಾದಲ್ಲಿ ಎದೆ ಮತ್ತು ದೇಹದ ಮೇಲ್ಭಾಗ ಸಂಪೂರ್ಣವಾಗಿ ಕೂಡಿಕೊಂಡ ಅವಳಿ ಹೆಣ್ಣು ಮಕ್ಕಳು ಸಿದ್ದಿ ಮತ್ತು ರಿದ್ದಿ ಎನ್ನುವ ಈ ಅವಳಿ ಮಕ್ಕಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ವೈದ್ಯರು ಬೇರ್ಪಡಿಸಿದ್ದಾರೆ.
ಸತತ ಹನ್ನೆರಡು ಗಂಟೆಗಳಿಗಿಂತಲೂ ಜಾಸ್ತಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಸಯಾಮಿ ಮಕ್ಕಳನ್ನು ಬೇರ್ಪಡಿಸಲು ವೈದ್ಯರು ಯಶಸ್ವಿಯಾಗಿದ್ದಾರೆ.
2022 ರಲ್ಲಿ ಸಯಾಮಿ ಮಕ್ಕಳು ಜನಿಸಿದರು. ಐದು ತಿಂಗಳ ಮಕ್ಕಳನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಇದೀಗ ಮಕ್ಕಳಿಗೆ 11 ತಿಂಗಳಾಗಿದ್ದು, ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಮಕ್ಕಳ ಪಕ್ಕೆಲುವುಗಳು, ಯಕೃತ್ತು ಮತ್ತು ಎರಡು ಹೃದಯಗಳು ಒಂದಕ್ಕೊಂದು ತೀರ ಹತ್ತಿರವಾಗಿದ್ದು, ಶಸ್ತ್ರ ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಮಕ್ಕಳು ಮೊದಲ ಹುಟ್ಟುಹಬ್ಬವನ್ನು ಆಸ್ಪತ್ರೆಯಲ್ಲಿ ಆಚರಿಸಲಾಯಿತು.






