ಇತರೆ

ಶಿವಮೊಗ್ಗ ಮಂಡಗದ್ದೆಯಲ್ಲಿ ನದಿಗೆ ಉರುಳಿದ ಕಾರು: ಕುಂದಾಪುರ ಮೂಲದ ತೆಕ್ಕಟ್ಟೆಯ ಮಹಿಳೆ ಸಾವು 

Views: 608

ಕನ್ನಡ ಕರಾವಳಿ ಸುದ್ದಿ: ಕಾರು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದ ಪರಿಣಾಮ ಕುಂದಾಪುರ ಮೂಲದ ತೆಕ್ಕಟ್ಟೆಯ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶಿವಮೊಗ್ಗ  ಜಿಲ್ಲೆಯ ಮಂಡಗದ್ದೆಯಲ್ಲಿ ಜೂನ್ 29ರಂದು ಬೆಳಿಗ್ಗೆ ನಡೆದಿದೆ.

ತೆಕ್ಕಟ್ಟೆಯ ಮಣಿಕಂಠ ಟ್ರಾನ್ಸ್‌ಪೋರ್ಟ್ ಮಾಲಕ ಶಂಕರ ದೇವಾಡಿಗ ತೆಕ್ಕಟ್ಟೆ ಅವರು ಶಿವಮೊಗ್ಗದಲ್ಲಿರುವ ಮಗಳ ಮನೆಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕುಟುಂಬದ ಆರು ಮಂದಿ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ನದಿಗೆ ಉರುಳಿದೆ.ಶಂಕರ ದೇವಾಡಿಗ ಅವರ ಪತ್ನಿ ಸವಿತಾ ದೇವಾಡಿಗ (57) ಸಾವನ್ನಪ್ಪಿದರು.

ಕಾರು ನೀರಿನಲ್ಲಿ ಮುಳುಗುತ್ತಿದಂತೆ ಸ್ಥಳೀಯರು ಧಾವಿಸಿ ಬಂದು ರಕ್ಷಣೆಗಿಳಿದರು.ಶಂಕರ ದೇವಾಡಿಗ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪುತ್ರರಾದ ಅರುಣ್ ದೇವಾಡಿಗ ಹಾಗೂ ಎಂಜಿನಿಯ‌ರ್ ಅಶ್ವತ್ಥ ದೇವಾಡಿಗ, ಪುತ್ರಿ ಅಮೃತಾ, ಅಳಿಯ ಸುರೇಶ್ ದೇವಾಡಿಗ ಹಾಗೂ ಎರಡೂವರೆ ವರ್ಷದ ಅಭಿಶ್ರೇಯ್ ಅವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button