ಧಾರ್ಮಿಕ
ವಿಶೇಷ ಹರಕೆಯ ಕೊರಗಜ್ಜ ದೈವದ ನೇಮೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

Views: 28
ಕನ್ನಡ ಕರಾವಳಿ ಸುದ್ದಿ: ಮೂರನೇ ಬಾರಿಗೆ ನರೇಂದ್ರ ಮೋದಿ ಆಯ್ಕೆಯಾಗಿ ಪ್ರಧಾನಿಯಾಗಿ ಸರಕಾರ ನಡೆಸಬೇಕು ಎಂದು ಬಿಜೆಪಿ ಜಯನಗರ ಬೂತ್ ಸಮಿತಿಯವರು ಸಾನಿಧ್ಯದಲ್ಲಿ ಸಂಕಲ್ಪ ಮಾಡಿಕೊಂಡಿದ್ದಂತೆ ಸುಳ್ಯ ಬಿಜೆಪಿ ಜಯನಗರ ಬೂತ್ ಸಮಿತಿ ಮತ್ತು ಬಿಜೆಪಿ ಸುಳ್ಯ ನಗರ ಮಹಾಶಕ್ತಿ ಕೇಂದ್ರ ಸಹಯೋಗದೊಂದಿಗೆ ಕಾರಣಿಕ ಶ್ರೀ ಕ್ಷೇತ್ರ ಕೊರಂಬಡ್ಕದಲ್ಲಿ ಸಂಕಲ್ಪ ಮಾಡಿಕೊಂಡಂತೆ ಮೇ 17ರ ಶನಿವಾರ ವಿಶೇಷ ಹರಕೆಯ ಶ್ರೀ ಕೊರಗಜ್ಜ ದೈವದ ನೇಮೋತ್ಸವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗಿಯಾದರು.
ಬಿ.ವೈ.ವಿಜಯೇಂದ್ರ ಭಾಗವಹಿಸಿ ದೈವದ ಪ್ರಸಾದ ಸ್ವೀಕರಿಸಿ, ಅಭಯ ನುಡಿ ಪಡೆದರು. ಸಂಸದ ಬ್ರಿಜೇಶ್ ಚೌಟ ಮೂಲಕ ಕೊರಗಜ್ಜ ದೈವದ ಪ್ರಸಾದವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸಲಾಗುವುದು ಎಂದು ಸುಳ್ಯ ಬಿಜೆಪಿ ಬೂತ್ ಸಮಿತಿಯವರು ತಿಳಿಸಿದ್ದಾರೆ.
ಈ ವೇಳೆ ಸಂಸದ ಬ್ರಿಜೇಶ್ ಚೌಟ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸೇರಿ ಬಿಜೆಪಿ ಕಾರ್ಯಕರ್ತರು ನಾಯಕರು ಭಾಗಿಯಾಗಿದ್ದರು.