ವಿವಾದಾತ್ಮಕ ಹೇಳಿಕೆ ನೀಡಿದ ನಟ ದರ್ಶನ್ ಬಹಿರಂಗ ಕ್ಷಮೆಗೆ ಮಹಿಳೆಯರ ಪಟ್ಟು, ಆಯೋಗಕ್ಕೆ ದೂರು

Views: 56
ಫೆಬ್ರವರಿ 17ನೇ ತಾರೀಖು. ದರ್ಶನ್ ಸಿನಿ ಪಯಣ ಆರಂಭಿಸಿ 25 ವರ್ಷ ಪೂರೈಸಿದ ಕಾರಣ ಫ್ಯಾನ್ಸ್ ಎಲ್ಲಾ ಸೇರಿ ಡಿ25 ಬೆಳ್ಳಿ ಪರ್ವ ಕಾರ್ಯಕ್ರಮವನ್ನು ಶ್ರೀರಂಗಪಟ್ಟಣದಲ್ಲಿ ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ತಾನು ಇಷ್ಟು ದೊಡ್ಡ ಸ್ಟಾರ್ ಆಗಲು ಪಟ್ಟ ಕಷ್ಟಗಳೆಷ್ಟು ಅನ್ನೋದನ್ನು ವಿವರಿಸುವಾಗ ಹೇಳಿದ ಈ ಡೈಲಾಗ್ ಇದೀಗ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.
ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ, ಇವರ ಅಜ್ಜಿನೇ ಬಡಿಯಾ ಎಂದಿದ್ದರು ದರ್ಶನ್. ಇದೇ ವಿಚಾರವಾಗಿ ಹಲವು ಸಂಘಟನೆಯ ಮಹಿಳೆಯರು ಜಯಶ್ರೀ , ರೇಣುಕಾ ನೇತೃತ್ವದಲ್ಲಿ ಕಾವೇರಿ ಭವನದಲ್ಲಿರೋ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಜೊತೆಗೆ ದರ್ಶನ್ ಬಹಿರಂಗವಾಗಿ ಕ್ಷಮೆ ಕೇಳ್ಬೇಕು ಅಂತಾನೂ ಆಗ್ರಹಿಸಿದ್ದಾರೆ.
ಸಾರ್ವಜನಿಕವಾಗಿ ಮಹಿಳೆಯರ ಬಗ್ಗೆ ನಟ ದರ್ಶನ್ ಹೀಗೆ ಪದೇ ಪದೇ ಅವಹೇಳನವಾಗಿ ಮಾತನಾಡಿತ್ತಿರೋದು ಎಷ್ಟು ಸರಿ? ವೇದಿಕೆಯಲ್ಲಿ ಸಂಸದೆ ಸುಮಲತಾ, ಸ್ವಾಮಿಜಿಗಳು ಇದ್ರು. ಅವರೂ ಏಕೆ ಇದನ್ನ ಪ್ರಶ್ನೆ ಮಾಡಿಲ್ಲ. ಅಂತಾನೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇನೇ ಇರ್ಲಿ ಒಬ್ಬ ಮಾದರಿ ನಟನಾಗಿ ಲಕ್ಷಾಂತರ ಅಭಿಮಾನಿಗಳ ನಾಯಕನಾಗಿರೋ ದರ್ಶನ್ ಅಭಿಮಾನಿಗಳಿಗೆ ಕೊಡೋ ಸಂದೇಶ ಇದೇನಾ? ಅವರು ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕು ಅಂತ ಸಿನಿಮಾಗಳಲ್ಲಿ ಮಾತ್ರ ಡೈಲಾಗ್ ಹೊಡೆದ್ರೆ ಸಾಕಾ? ನಿಜ ಜೀವನದಲ್ಲಿ ಅದನ್ನ ಫಾಲೋ ಮಾಡೋಲ್ವಾ ಅಂತ ಮಹಿಳೆಯರು ಪ್ರಶ್ನೆ ಮಾಡ್ತಿದ್ದಾರೆ. ಜೊತೆಗೆ ಕ್ಷಮೆಯಾಚಿಸದೇ ಇದ್ರೆ ಅವರ ಮನೆಯ ಮುಂದೆ ಹೋರಾಟ ಮಾಡೋದಾಗಿಯೋ ಎಚ್ಚರಿಸಿದ್ದಾರೆ. ಇದಕ್ಕೆ ದರ್ಶನ್ ಏನ್ ಉತ್ತರಿಸ್ತಾರೆ ಕಾದು ನೋಡ್ಬೇಕಿದೆ.
ನಟ ದರ್ಶನ್ ಅಶ್ಲೀಲವಾಗಿ ಹೆಣ್ಣು ಮಕ್ಕಳ ಬಗ್ಗೆ ಒಂದು ವೇದಿಕೆ ಮೇಲೆ ಮಾತಾಡುತ್ತಾರೆ ಅಂದ್ರೆ ಎಷ್ಟು ಸರಿ. ಅವರನ್ನು ಹೆತ್ತಿರುವುದು ತಾಯಿ ಅಲ್ವಾ? ಅವರು ಈ ಮಟ್ಟಕ್ಕೆ ಬೆಳಸಿ ನಾಯಕರನ್ನಾಗಿ ಮಾಡಿದ್ದು ಹೆಣ್ಣು ಅಲ್ವಾ ಅಂತಾ ನಟ ದರ್ಶನ್ ವಿರುದ್ಧ ಮಹಿಳೆಯರು ಕೆಂಡಕಾರಿದ್ದಾರೆ.
ಅವರನ್ನು ಹೆತ್ತಿರುವುದು ತಾಯಿ ಅಲ್ವಾ? ಅವರು ಈ ಮಟ್ಟಕ್ಕೆ ಬೆಳಸಿ ನಾಯಕರನ್ನಾಗಿ ಮಾಡಿದ್ದು ಹೆಣ್ಣು ಅಲ್ವಾ? ನಟ ದರ್ಶನ್ ಅವರು ಅಶ್ಲೀಲವಾಗಿ ಹೆಣ್ಣು ಮಕ್ಕಳ ಬಗ್ಗೆ ಒಂದು ವೇದಿಕೆ ಮೇಲೆ ಹೀಗೆ ಮಾತಾಡುತ್ತಾರೆ ಅಂದ್ರೆ ಅದು ಎಷ್ಟು ಸರಿ. ಅವರು ಇದಕ್ಕೆ ಕ್ಷಮೆ ಕೇಳಲೇಬೇಕು ಎಂದರು.