ಶಿಕ್ಷಣ

ವಕ್ವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮವಸ್ತ್ರ ವಿತರಣೆ 

Views: 352

ಕನ್ನಡ ಕರಾವಳಿ ಸುದ್ದಿ: ವಕ್ವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಾನಿಗಳಿಂದ ಕೊಡಮಾಡಿದ ಸಮವಸ್ತ್ರ, ಬೆಲ್ಟ್, ಐಡಿ, ಹಾಗೂ ಟ್ರ್ಯಾಕ್ ಸೂಟ್ ನ್ನು ಲಕ್ಗ್, ಹಾಗೂ ಹೊಸ ದಾಖಲಾತಿ ಆದ ಎಲ್ಲ ಮಕ್ಕಳಿಗೆ ನೀಡಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅನಂತ ಪದ್ಮನಾಭ ಶೆಟ್ಟಿಗಾರರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತ್ಯರಂಜನ್ ಹೆಗ್ಡೆ ಅವರು ದೀಪ ಬೆಳಗಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಮೇಶ್ ಶೆಟ್ಟಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಶಾಲಾಭಿವೃಡ್ಡಿ ಸಮಿತಿ ಸದಸ್ಯರಾದ ವಿಜಯ ಕುಮಾರ್, ಸದಾಶಿವ ಶೆಟ್ಟಿಗಾರ್, ಮುರಳಿಧರ್, ಮಮತಾ ಶೆಟ್ಟಿ, ಕೀರ್ತಿ, ಮಮತಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಕ್ಯೋಪಾಧ್ಯಾರಾದ ಪ್ರಕಾಶ್ ರವರು ಸ್ವಾಗತಿಸಿದರು. ಗೌರವ ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿ ಅನಿತಾ. ಜಿ. ವಂದಿಸಿದರು.

Related Articles

Back to top button
error: Content is protected !!