ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ; ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪೂರ್ವಭಾವಿ ಸಾಮೂಹಿಕ ಪ್ರಾರ್ಥನೆ

Views: 291
ಕನ್ನಡ ಕರಾವಳಿ ಸುದ್ದಿ :ವಕ್ವಾಡಿ ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಶ್ರೀ ಕ್ಷೇತ್ರ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಫೆಬ್ರವರಿ 13ರಂದು ಶ್ರೀದೇವರ ಸನ್ನಿಧಿಯಲ್ಲಿ ವಕ್ವಾಡಿ ಗ್ರಾಮಸ್ಥರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಆರೂಢ ಪ್ರಶ್ನೆ ಚಿಂತನೆಯಲ್ಲಿ ಹೇಳಿದಂತೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಹಣ್ಣು ಕಾಯಿ ಮತ್ತು ಕಡುಬು ಸೇವೆ ಸಲ್ಲಿಸಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ದೇವಳದ ಧರ್ಮದರ್ಶಿ ಕೆ. ರಮಣ ಉಪಾಧ್ಯಾಯ, ನಟೇಶ್ ಕಾರಂತ್, ಪರ್ಯಾಯ ಅರ್ಚಕರಾದ ಕೃಷ್ಣಾನಂದ ಉಪಾಧ್ಯಾಯ, ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಧರ್ಮದರ್ಶಿ ಲಕ್ಷ್ಮೀ ನಾರಾಯಣ ಹೊಳ್ಳ, ಅರ್ಚಕ ಗಿರೀಶ್ ಐತಾಳ್, ಪುಟ್ಟರಾಜ್ ಹೆಬ್ಬಾರ್, ಸತ್ಯನಾರಾಯಣ ಶೆಟ್ಟಿ, ಸತೀಶ್ ಪೂಜಾರಿ, ಆನಂದ ಆಚಾರ್ಯ, ರವಿರಾಜ್ ಶೆಟ್ಟಿ, ಕರುಣಾಕರ ಶೆಟ್ಟಿ, ವ್ಯವಸ್ಥಾಪನ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿಯ ಸಮಿತಿ ಸದಸ್ಯರು ಹಾಗೂ ವಕ್ವಾಡಿ ಗ್ರಾಮದ ಸಮಸ್ತರು ಉಪಸ್ಥಿತರಿದ್ದರು.