ಜನಮನ

ಲೋಕಸಭಾ ಚುನಾವಣೆ ಬೆನ್ನಲ್ಲೇ ವಿದ್ಯುತ್ ದರ ಪ್ರತಿ ಯೂನಿಟ್‌ಗೆ 1 ರೂಪಾಯಿ 10 ಪೈಸೆ ಇಳಿಕೆ 

Views: 44

ಬೆಂಗಳೂರು: ಸರಾಸರಿ 100 ಯೂನಿಟ್​ಗಿಂತ ಹೆಚ್ಚು ವಿದ್ಯುತ್‌ ಬಳಸುವವರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ. ವಿದ್ಯುತ್ ದರ ಪ್ರತಿ ಯೂನಿಟ್‌ಗೆ 1 ರೂಪಾಯಿ 10 ಪೈಸೆ ಇಳಿಕೆ ಮಾಡಿ ಆದೇಶಿಸಲಾಗಿದೆ.

ವಿದ್ಯುತ್ ದರ ಇಳಿಕೆ ಮಾಡಿರುವ ರಾಜ್ಯ ಸರ್ಕಾರ, ವಾಣಿಜ್ಯ ಬಳಕೆದಾರರಿಗೂ ಬಿಗ್‌ ರಿಲೀಫ್ ಕೊಟ್ಟಿದೆ. ಕಮರ್ಷಿಯಲ್ ವಿದ್ಯುತ್ ಬಳಕೆದಾರರಿಗೆ ಪ್ರತಿ ಯೂನಿಟ್​ಗೆ 1 ರೂಪಾಯಿ 25 ಪೈಸೆ ದರ ಇಳಿಕೆ ಮಾಡಲಾಗಿದೆ. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಯೂನಿಟ್​ಗೆ 40 ಪೈಸೆ, ಖಾಸಗಿ ಏತ ನೀರಾವರಿ ಬಳಕೆದಾರರಿಗೆ 2 ರೂಪಾಯಿ ಕಡಿತ ಮಾಡಲಾಗಿದೆ.

ವಿದ್ಯುತ್ ದರ ಇಳಿಕೆ ಮಾಡಿರುವ ರಾಜ್ಯ ಸರ್ಕಾರದ ಪರಿಷ್ಕೃತ ದರ ಇದೇ ಮಾರ್ಚ್‌ 1ರಿಂದ ಅನ್ವಯ ಆಗುತ್ತಿದೆ. 100 ಯೂನಿಟ್​ಗಿಂತ ಹೆಚ್ಚು ಬಳಸುವವರಿಗೆ ಮಾತ್ರ ಈ ಹೊಸ ದರ ಅನ್ವಯವಾಗುತ್ತಿದೆ.

Related Articles

Back to top button